Link copied!
Sign in / Sign up
14
Shares

2017ನೆ ಸಾಲಿನ ಟಾಪ್ ೧೦ ಹೆಣ್ಣು ಶಿಶು ಹೆಸರುಗಳು

ಹೆಣ್ಣು ಮಗುವಿನೊಂದಿಗಿನ ಜೀವನ ಉಲ್ಲಾಸದಿಂದ ಕೂಡಿರುತ್ತದೆ. ಏಕೆಂದರೆ ಅಪ್ಪಂದಿರು ತಮ್ಮ ಮಗಳು ಮಾಡುವ ಹುಡುಗಿ ತರಲೆಗಳನ್ನ ನೋಡಬಹುದು ಹಾಗು ಅಮ್ಮಂದಿರು ಮಗಳನ್ನು ಗೊಂಬೆ ರೀತಿ ಬಟ್ಟೆ ತೊಡಿಸಿ ತಯಾರು ಮಾಡಿ ಕಣ್ಣು ತುಂಬಿಕೊಳ್ಳಬಹುದು. ಒಂದು ಹೆಣ್ಣು ಮಗು ಹಡೆದು ಆಕೆಯೂ ಬಾನೆತ್ತರಕ್ಕೆ ಬೆಳೆಯುವುದನ್ನ ನೋಡುವುದೇ ಪೋಷಕರಿಗೆ ಹೆಮ್ಮೆ. ಹೆಣ್ಣು ಮಕ್ಕಳು ಖಂಡಿತವಾಗಿಯೂ ದೇವರು ಪೋಷಕರಿಗೆ ನೀಡಿದ ಕಾಣಿಕೆ.

ಎಲ್ಲರು ಹೇಳುವ ಪ್ರಕಾರ ಮಗುವಿನ ಸ್ವಭಾವ ಅದು ಭೂಮಿಗೆ ಕಾಲಿಟ್ಟ ಕ್ಷಣದಿಂದ ರೂಪುಗೊಳ್ಳಲು ಶುರುವಾಗುತ್ತದೆ. ಹಾಗಾಗಿ ನಿಮ್ಮ ಪುಟ್ಟ ಮಗಳಿಗೆ ಅವಳ ಸ್ವಭಾವಕ್ಕೆ ತಕ್ಕುವ ಒಂದು ಒಳ್ಳೆಯ ಹೆಸರು ಬೇಕು.

ನಿಮ್ಮ ರಾಜಕುಮಾರಿಗೆ ಇಲ್ಲಿವೆ ಕೆಲವು ಟ್ರೆಂಡ್ ಅಲ್ಲಿ ಇರುವ ಹೆಸರುಗಳು

೧. ಆಮನಿ

ನಿಮ್ಮ ಮಗಳು ವಸಂತದಲ್ಲಿ ಹುಟ್ಟಿದ್ದರೆ, ಇದು ಅವಳಿಗೆ ಸೂಕ್ತ ಹೆಸರು. ಈ ಕಾಲವು ಹೊಸ ಚಿಗುರು, ಹೊಸ ಜೀವನದ ಆರಂಭವನ್ನು ಸೂಚಿಸುತ್ತದೆ. ಅಂದರೆ ನಿಮ್ಮ ಮಗಳೊಡನೆ ನಿಮ್ಮ ಹೊಸ ಜೀವನ ಆರಂಭ ಆಗುವ ಹಾಗೆ.ನಿಮಗೂ ಹೀಗೆ ಅನಿಸಿದಿರೆ ನಿಮ್ಮ ಮಗುವಿಗೆ ಇಡಬೇಕಾದ ಹೆಸರು ಆಮನಿ.

೨. ಅಹಾನ

ಈ ಹೆಸರಿನಲ್ಲೇ ಒಂದು ಶಕ್ತಿಯಿದೆ. ನಿಮ್ಮ ಮಗಳ ಜನನವು ನಿಮ್ಮ ಬಾಳಿಗೆ ಹೊಸ ಬೆಳಕು ಹಾಗು ಹೊಸ ಜೀವ ತುಂಬಿದ್ದರೆ ನೀವು ಅವಳಿಗೆ ಈ ಹೆಸರು ಇಡಬೇಕು. ಅಹಾನ ಎಂದರೆ ಸೂರ್ಯನ ಮೊದಲ ಕಿರಣ ಎಂದು.

೩. ಅನಯ

ದೇವರು ನಿಮ್ಮ ಪ್ರಾರ್ಥನೆಗಳಿಗೆ ತರನಾದ ರೀತಿಗಳಲ್ಲಿ ಉತ್ತರಿಸುತ್ತಾನೆ. ನೀವು ನಿಮ್ಮ ಮಗಳನ್ನು ಅನಯ ಎಂದು ಹೆಸರಿಡಬಹುದು ಏಕೆಂದರೆ ಅನಯ ಎಂದರೆ “ದೇವರ ಉತ್ತರ” ಎಂದು. ನೀವು ತುಂಬಾ ಪ್ರಯತ್ನ ನಡೆಸಿದ ನಂತರ ನಿಮಗೆ ಮಗುವಾಗಿದ್ದರೆ, ಇದುವೇ ಸೂಕ್ತ ಹೆಸರು!

೪. ಈವ

ಬದುಕೆಂಬ ಮರ - ಈ ರಹಸ್ಯಮಯ ಪದವು ಈ ಭೂಮಿಯ ಅಸ್ತಿತ್ವಕ್ಕೆ ಬರುವ ಸಮಯಕ್ಕೆ ಸಂಬಂಧ ಪಟ್ಟಿದ್ದು. ಇದು ಸಾಧಾರಣವಾಗಿ ಪ್ರಾಣಿಗಳು ಹಾಗು ಗಿಡಗಳಿಗೆ ಸಂಬಂಧ ಪಟ್ಟ ವಿಷಯಗಳಲ್ಲಿ ಉಪಯೋಗಿಸುವುದು.

೫. ಇಬ್ಬನಿ

ಇದರ ಅರ್ಥ ನಿಮಗೆ ತಿಳಿದೇ ಇರುತ್ತದೆ. ನಿಮ್ಮ ಮಗುವು ಶಾಂತರೂಪಿ ಆಗಿದ್ದರೆ, ಈ ಹೆಸರು ಆಕೆಗೆ ಸೂಕ್ತ.

೬. ಸಾಯಿರ

ಹಿಂದಿನ ಕಾಲದಲ್ಲಿ ರಾಣಿಯರಿಗೆ ಸಾಯಿರ ಎಂದು ಕರೆಯುತ್ತಿದ್ದರು. ಹುಡುಗಿಯರು ಎಂದಿಗೂ ತಮ್ಮೆ ಅಪ್ಪನಿಗೆ ರಾಜಕುಮಾರಿ ಆಗಿರುವ ಕಾರಣ, ನಿಮ್ಮ ಪುಟ್ಟ ರಾಜಕುಮಾರಿಗೆ ಈ ಹೆಸರು ಇಡಬಹುದು.

೭. ವಿಯೋಮಿ

ವಿಯೋಮಿ ಅಂದರೆ ಆಕಾಶ ಎಂದರ್ಥ. ಹೆಣ್ಣು ಮಕ್ಕಳು ತಮ್ಮ ಆಕಾಂಕ್ಷೆಗಳಲ್ಲಿ ಆಕಾಶವನ್ನೇ ಮುಟ್ಟುವರು. ಆದರಿಂದ ಅವರ ವ್ಯಕ್ತಿತ್ವಕ್ಕೆ ಸರಿ ಹೊಂದುವಂತ ಹೆಸರು ಇದಾಗಿದೆ.

೮.  ಮೇಯ್ರ

ಮೇಯ್ರ ಅಂದರೆ ಬೆಲೆಕಟ್ಟಲಾಗದು ಎಂದು. ಇದಕ್ಕೆ ಇರುವ ಇನ್ನು ಕೆಲವು ಅರ್ಥಗಳೆಂದರೆ ಆರಾಧನೀಯ, ಅಸಾಧಾರಣ ಎಂದು. ನಿಮ್ಮ ಮಗುವು ಕೂಡ ನಿಮಗೆ ಬೆಲೆ ಕಟ್ಟಲಾಗದಂತಹ ದೇವರ ಬಳುವಳಿ ಆಗಿರುವ ಕಾರಣ ನೀವು ಅವಳಿಗೆ ಈ ಹೆಸರನ್ನು ಇಡಬಹುದು.

೯. ಆಮಿಷ

ಇದರ ಅರ್ಥ ಸ್ವಭಾವದಲ್ಲಿ ವಿಭಿನ್ನ ಹಾಗು ನಿಮ್ಮ ಜೀವನದ ವಿಶೇಷ ಭಾಗವೆಂದು. ಇದೊಂದು ಹಿಂದು ಹುಡುಗಿ ಹೆಸರಾಗಿದ್ದರು , ಇದಕ್ಕೆ ಸ್ವಲ್ಪ ರಶಿಯಾದ ಟಚ್ ಇದೆ.

೧೦. ದೇವಿನ

ಹೆಣ್ಣು ಮಗು ಮನೆಗೆ ದೇವಿ ಇದ್ದ ಹಾಗೆ. ಹಾಗಾಗಿ ನಿಮ್ಮ ಮಗಳನ್ನು ದೇವಿನ ಎಂದು ಯಾಕೆ ಕರೆಯಬಾರದು?    

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon