ಹೆಸರು ಎಂದರೆ ಒಬ್ಬ ಮನುಷ್ಯನನ್ನು ಕರೆಯಲು, ಗುರುತಿಸಲು ಇರುವ ಪದ. ಇದು ಒಬ್ಬರ ಗುರುತು, ಒಬ್ಬರ ಕರೆ, ಒಬ್ಬರ ಪ್ರತ್ಯೇಕತೆ. ನೀವು ನಿಮ್ಮ ಮಗುವಿಗೆ ಎಲ್ಲರು ಇಷ್ಟಪಡುವಂತ, ವಿಭಿನ್ನ, ವಿಶಿಷ್ಟ ಹೆಸರನ್ನು ಹುಡುಕಲಿಕ್ಕೆ ಎಷ್ಟು ಪರದಾಡುತ್ತೀರಿ ಎಂಬುದು ನಮಗೆ ಗೊತ್ತು. ಎಲ್ಲದಕ್ಕೂ ಮಿಗಿಲಾಗಿ, ಇದು ನೀವು ನಿಮ್ಮ ಮಗುವಿಗೆ ಕೊಡುವ ಮೊದಲ ಶಾಶ್ವತ ಉಡುಗೊರೆ. ನಮ್ಮ ದೇಶದಲ್ಲಿ ಹಲವಾರು ಮಂದಿ ತಮ್ಮ ಮಕ್ಕಳಿಗೆ ತಮ್ಮ ಪೂರ್ವಜರ ಹೆಸರು ಇಡುತ್ತಾರೆ. ನೀವು ಅಂತವರಲ್ಲಿ ಒಬ್ಬರಲ್ಲ ಅಂದರೆ, ನೀವು ನಿಮ್ಮ ಮಗುವಿಗೆ ನವೀನವಾದ, ವಿಶಿಷ್ಟವಾದ ಹೆಸರು ನೀಡಬೇಕೆಂದರೆ, ನಾವು ನಿಮಗೆ ಇವಾಗ ಚಾಲ್ತಿಯಲ್ಲಿರುವ ವಿಭಿನ್ನ ಹೆಸರುಗಳನ್ನ ನಾವು ನಿಮಗೆ ತಿಳಿಸುತ್ತೇವೆ.
ಈ ಹೆಸರುಗಳ ಪಟ್ಟಿ ನೋಡಿ ನಿಮ್ಮ ರಾಜಕುಮಾರ ಅಥವಾ ರಾಜಕುಮಾರಿಗೆ ಯಾವುದು ಸೂಕ್ತವಾದ ಹೆಸರು ಎಂಬುದನ್ನು ತಿಳಿದುಕೊಳ್ಳಿ
ಹುಡುಗ - ಆರುಶ್
ಅರ್ಥ - ಚಳಿಗಾಲದ ಸೂರ್ಯನ ಮೊದಲ ಕಿರಣ
ಹುಡುಗಿ - ಅಸಿರ
ಅರ್ಥ - ನಂಬಿಕೆ
ಹುಡುಗಿ - ಚಾರ್ವಿ
ಅರ್ಥ - ಸುಂದರವಾದ ಹುಡುಗಿ ಅಥವಾ ಹೆಣ್ಣು
ಹುಡುಗಿ- ಇಧಾ
ಅರ್ಥ- ಭೂಮಿ
ಹುಡುಗಿ - ಇಧಿತ್ರಿ
ಅರ್ಥ - ಹೊಗಳುವವಳು
ಹುಡುಗ - ನೇಸಯಂ
ಅರ್ಥ - ಹೂವು
ಹುಡುಗ - ಸನ್ನಿತ್
ಅರ್ಥ- ಸ್ವಾವಲಂಬಿ, ವಾಸ್ತವಿಕ
ಹುಡುಗಿ - ಇಪ್ಸಿತಾ
ಅರ್ಥ - ಲಕ್ಷ್ಮಿ
ಹುಡುಗ - ವ್ಯೊಂ
ಅರ್ಥ - ಆಕಾಶ
ಹುಡುಗ - ಇಧಾಂತ್
ಅರ್ಥ - ಹೊಳಪು
ನೀವು ನಿಮ್ಮ ಮಗುವಿಗೆ ಏನೇ ಹೆಸರಿಟ್ಟರು, ಅವರು ಅಮೂಲ್ಯ ಹಾಗು ವಿಭಿನ್ನ ವ್ಯಕ್ತಿಗಳಾಗುತ್ತಾರೆ. ಹಾಗಾಗಿ, ಅವರಿಗೆ ಜನಪ್ರಿಯ ಹೆಸರುಗಳನ್ನೇ ನೀಡಬೇಕೆಂದು ತಲೆ ಕೆಡಿಸಿಕೊಳ್ಳಬೇಡಿ. ಈ ಮೇಲಿನ ಪಟ್ಟಿಯು ತಾಯಿ ಆಗುವವರಿಗೆ ಒಂದು ಉಪಾಯ ನೀಡಲಿಕ್ಕೆ ಅಷ್ಟೇ. ಆದರಿಂದ, ನಾವು ನಿಮ್ಮ ಮಗುವಿಗೆ ನಿಮ್ಮ ಹೃದಯದಿಂದ ಬಂದ ಹೆಸರನ್ನು ನೀಡಲು ಸಲಹೆ ನೀಡುತ್ತೇವೆ.
