Link copied!
Sign in / Sign up
9
Shares

ಹರಳೆಣ್ಣೆಯಿಂದ ನಿಮ್ಮ ಕೂದಲಿಗೆ ಆಗಬಹುದಾದ ೧೫ ಪ್ರಯೋಜನಗಳು (15 Ways Castor Oil Can Benefit Your Hair In Kannada)

ಕಟುವಾದ ವಾಸನೆಯುಳ್ಳ, ದಟ್ಟವಾದ ಹರಳೆಣ್ಣೆಯ ಚಿಕಿತ್ಸಾ ಗುಣದಿಂದ ತಲತಲಾಂತರದಿಂದ ಹೆಸರುವಾಸಿಯಾಗಿದೆ. ಶ್ಲಾಘನೆಗೆ ಒಳಗಾಗಿರುವ ಈ ಹರಳೆಣ್ಣೆ ಕೇಶ ಸೌಂದರ್ಯ ಮತ್ತು ಚರ್ಮ ಸೌಂದರ್ಯಕ್ಕೆ ಅತಿ ಉಪಯುಕ್ತ. ಆದರೆ ಈ ಹರಳೆಣ್ಣೆಯನ್ನು ಹೇಗೆ ಉಪಯೋಗಿಸಬೇಕು? ಅದರ ಪ್ರಯೋಜನಗಳೇನು? - ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವುದಕ್ಕೆ ಈ ಲೇಖನ ಓದಿ. 

ಪರಿವಿಡಿ:

೧. ಹರಳೆಣ್ಣೆ ಎಂದರೇನು?

೨. ಹರಳೆಣ್ಣೆಯನ್ನು ಹೇಗೆ ತಯಾರಿಸುತ್ತಾರೆ?

೩. ಹರಳೆಣ್ಣೆಯ ಬಳಕೆಗಳು

೪. ಹರಳೆಣ್ಣೆಯನ್ನು ಹೇಗೆ ಉಪಯೋಗಿಸಬೇಕು?

೫. ಹರಳೆಣ್ಣೆಯ ಪ್ರಯೋಜನಗಳು 

೧. ಹರಳೆಣ್ಣೆ ಎಂದರೇನು?

ವೈಜ್ಞಾನಿಕವಾಗಿ ರಿಷಿನಸ್ ಕಂಮ್ಯುನಿಸ್ ಎನ್ನುವ ಹೆಸರಿನಿಂದ ವಾಸಿಯಾಗಿರುವ ಹರಳೆಣ್ಣೆ ಬಹುಉಪಯೋಗಗಳನ್ನು ಹೊಂದಿರುವ ಹಳದಿ ಬಣ್ಣದ ತರಕಾರಿ ತೈಲ. ಹರಳೆಣ್ಣೆಯನ್ನು ಹರಳೆ ಗಿಡದಿಂದ ಮಾಡಿ ತೆಗೆಯಲಾಗುತ್ತದೆ. ಕ್ಯಾಸ್ಟ್ರಿಯಮ್ ಬದಲಿಗೆ ಬಳಸುವ ಹರಳೆಣ್ಣೆಯನ್ನು ಆಂಗ್ಲದಲ್ಲಿ "ಕ್ಯಾಸ್ಟೋರ್ ಆಯಿಲ್" ಎನ್ನುತ್ತಾರೆ. ಹರಳೆಣ್ಣೆಯ ಇತರ ಹೆಸರುಗಳು ಇಂತಿವೆ: ಅರಂಡಿ ಎಣ್ಣೆ (ಹಿಂದಿಯಲ್ಲಿ), ಆಮುದಾಮು (ತೆಲಗು), ಎರಾಂಡೇಲ ತೇಲ (ಮರಾಠಿ), ಅಮಾನಕ್ಕು ಎಣ್ಣೆ (ತಮಿಳ್), ಅವನಕ್ಕೆನ್ನ (ಮಲಯಾಳಂ), ರೆರಿರ ತೇಲ (ಬಂಗಾಳಿ). ಹರಳೆಣ್ಣೆಯ ಮೂಲ ಆಫ್ರಿಕಾ ಮತ್ತು ಭಾರತ. 

ಕೇಶಕ್ಕೆ ಹರಳೆಣ್ಣೆಯ ಉಪಯೋಗಗಳು ಮತ್ತು ಇತರ ಆರೋಗ್ಯಕರ ಪ್ರಯೋಜನಗಳು ಹಲವಾರು. ಅದಕ್ಕೆ ಕಾರಣ ಅದರ ರಾಸಾಯನಿಕ ಸಂಯೋಜನೆ. ಹರಳೆಣ್ಣೆ ಸ್ವತಃ ಟ್ರೈಗ್ಲಿಸರೈಡ್ ಫ್ಯಾಟಿ ಆಸಿಡ್ ಆಗಿದ್ದು ೯೦ ಶೇಕಡಾ ರಿಸಿನೋಲಿಯಿಕ್ ಆಸಿಡ್ ಹೊಂದಿದೆ. 

೨. ಹರಳೆಣ್ಣೆಯನ್ನು ಹೇಗೆ ತಯಾರಿಸುತ್ತಾರೆ?

ಹರಳೆ ಬೀಜಗಳನ್ನು ಹಿಂಡಿ ಹರಳೆಣ್ಣೆಯನ್ನು ತೆಗೆಯುಲಾಗುತ್ತದೆ. ಹರಳೆ ಗಿಡ ವಿಷಕಾರಿಯಾಗಿರುವುದರೊಂದಿಗೆ, ಅದರಲ್ಲಿ ಪ್ರೋಟೀನ್ ಮತ್ತು ಅಲ್ಕೋಳೊನ್ಡ್ ರೈಸಿನ್ ಇರುತ್ತದೆ. ರೈಸಿನ್ ಮಾನವನ ಆರೋಗ್ಯಕ್ಕೆ ಹಾನಿಕಾರಿ. ಹಾಗಾಗಿ, ಹರಳೆಣ್ಣೆ ತಯಾರಿಸುವ ಮುನ್ನ ಹರಳೆ ಬೀಜಗಳನ್ನು ಹುರಿಯಲಾಗುತ್ತದೆ. ಹುರಿಯುವಾಗ ಅದಕ್ಕೆ ತಟ್ಟುವ ಶಾಖದಿಂದ ಬೀಜದಲ್ಲಿರುವ ವಿಷದಾಂಶ ಸಾಯುತ್ತದೆ. ಇದನ್ನು ಕೋಲ್ಡ್ ಪ್ರೆಸ್ಸ್ಡ್ ಹರಳೆಣ್ಣೆ ಎನ್ನುತ್ತಾರೆ. ಹರಳೆಣ್ಣೆಯನ್ನು  ರಾಸಾಯನಿಕಗಳ ಸಹಾಯದಿಂದ ಸಹ ತಯಾರಿಸಬಹುದು. ಆದರೆ ರಾಸಾಯನಿಕದ ಸಹಾಯದಿಂದ ತಯಾರಿಸಿದ ಹರಳೆಣ್ಣೆಯಲ್ಲಿ ಹಲವಾರು ಕಿಣಿಗಳಿರುವ ಸಾಧ್ಯತೆ ಹೆಚ್ಚು. ಆ ಕಿಣಿಗಳು ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಹಾಗಾಗಿ, ಕೋಲ್ಡ್ ಪ್ರೆಸ್ಸ್ಡ್ ಹರಳೆಣ್ಣೆ ಶೇಕಡಾ ೧೦೦ರಷ್ಟು ಶುದ್ಧವಾಗಿದ್ದು, ಕುಡಿಯಲು ಅಥವಾ ಆಹಾರದೊಂದಿಗೆ ಸೇವಿಸಲು ಸುರಕ್ಷಿತ. 

ವಿಶೇಷ ಸೂಚನೆ: ಹರಳೆ ಬೀಜಗಳಲ್ಲಿ ಹೆಚ್ಚಿನ ಮಟ್ಟದ ವಿಷ ಇರುವುದರಿಂದ, ಹರಳೆಣ್ಣೆಯನ್ನು ಮನೆಯಲ್ಲಿ ತಯಾರಿಸದೇ ಇರುವುದು ಒಳಿತು.

೩. ಹರಳೆಣ್ಣೆಯ ಬಳಕೆಗಳು:

ಹಲವಾರು ವರ್ಷಗಳಿಂದ ಹರಳೆಣ್ಣೆ ಚರ್ಮ ರೋಗದಿಂದ ಬಳಲುತ್ತಿರುವವರಿಗೆ ಸೂಕ್ತ ಪರಿಹಾರ ನೀಡುತ್ತಿದೆ. ಅದರೊಂದಿಗೆ, ಮಲಬದ್ಧತೆಯಂತಹ ಅರೋಗ್ಯ ಸಮಸ್ಯೆಗಳನ್ನು ಚಿಕಿತ್ಸಿಸುವಲ್ಲಿ ಸಹ ಸಹಾಯಕಾರಿ. ಕೂದಲಿಗೆ ಹರಳೆಣ್ಣೆಯಿಂದ ಆಗಬಹುದಾದ ಪ್ರಯೋಜನಗಳು ಅದ್ಭುತ. ಇತ್ತೀಚಿನ ಸಂಶೋಧನೆಯ ಪ್ರಕಾರ ಹರಳೆಣ್ಣೆ ರೋಗ ನಿರೋಧಕ ಶಕ್ತಿಯನ್ನೂ ನೀಡುತ್ತದೆ. ಹರಳೆಣ್ಣೆಯಲ್ಲಿ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಶಕ್ತಿ  ಇದ್ದು, ಉರಿಯೂತದ ವಿರೋಧಿಯೂ ಆಗಿದೆ. ಆದರೆ ಹರಳೆಣ್ಣೆಯನ್ನು ಹೇಗೆ ಬಳಸಬೇಕು? ಇಲ್ಲಿದೆ ಅದಕ್ಕೆ ಉತ್ತರ. 

ಹರಳೆಣ್ಣೆಯನ್ನು ಹಲವು ರೀತಿಯಲ್ಲಿ ಬಳಸಬಹುದು - ಮೇಲ್ಮೈಯ ಲೇಪನ ಅಥವಾ ಮೌಖಿಕವಾಗಿ ಸೇವಿಸುವುದು. 

ಮೇಲ್ಮೈ ಲೇಪನ:

ಹರಳೆಣ್ಣೆಯನ್ನು ನೇರವಾಗಿ ನಿಮ್ಮ ಚರ್ಮಕ್ಕೆ ಲೇಪಿಸಬಹುದಾಗಿದ್ದು, ಇದರಿಂದ ಹಲವಾರು ಉಪಯೋಗಗಳಿವೆ. ಆದರೆ ಹರಳೆಣ್ಣೆ ನಿಮ್ಮ ಕೂದಲಿಗೆ ಒಳ್ಳೆಯದೇ? ಈ ಪ್ರಶ್ನೆಗೆ ಉತ್ತರ ಹೌದು. ಹರಳೆಣ್ಣೆ ಹಚ್ಚಿಕೊಳ್ಳುವುದರಿಂದ ನಿಮ್ಮ ಕೂದಲ ಬೆಳವಣಿಗೆಯಾಗುತ್ತದೆ. ಚರ್ಮ ಲೇಪನಕ್ಕೆ ಹರಳೆಣ್ಣೆಯ ಪ್ಯಾಕ್ ಉಪಯೋಗಿಸಬಹುದು ಅಥವಾ ಅದನ್ನು ಬೇರೆ ಎಣ್ಣೆಯ ಜೊತೆ ಕೂಡಿಸಿ ಲೇಪನವಾಗಿ ಬಳಸಬಹುದು. 

ಹರಳೆಣ್ಣೆಯ ಲೇಪನದ ಉಪಯೋಗಗಳು ಇಂತಿವೆ: ಸಂಧಿವಾತ ಚಿಕಿತ್ಸೆ, ಕೂದಲನ್ನು ದಪ್ಪಗೊಳಿಸುವುದು, ಮೊಡವೆ ಚಿಕಿತ್ಸೆ, ಚರ್ಮದ ಆರ್ದ್ರತೆ ಹೆಚ್ಚಿಸುವುದು, ಚರ್ಮವನ್ನು ಆಳವಾಗಿ ಶುದ್ಧೀಕರಿಸುವುದು, ರೋಗ ನಿರೋಧಕ ಶಕ್ತಿಯನ್ನಿ ವರ್ಧಿಸುವುದು,  ಚರ್ಮವನ್ನು ನೀಡುವುದು, ಬಾವು ಮತ್ತು ಉರಿಯೂತವನ್ನು ಕಡಿಮೆಗೊಳಿಸುವುದು, ದುಗ್ಧನಾಳ ವ್ಯವಸ್ಥೆಯನ್ನು ಬೆಂಬಲಿಸುವುದು, ರಾಕ್ಟ್ಸ್ ಸಂಚಲನವನ್ನು ಹೆಚ್ಚಿಸುವುದು, ಗಾಯಗಳನ್ನು ಗುಣಪಡಿಸುವುದು, ಮುಟ್ಟಿನಲ್ಲಿ ಉಂಟಾಗುವ ಹೊಟ್ಟೆನೋವನ್ನು ನಿವಾರಿಸುವುದು. 

ಪ್ರತಿರಕ್ಷೆ ಸುಧಾರಣೆ, ಸುಕ್ಕುಗಳು ಮತ್ತು ಉತ್ತಮ ಸಾಲುಗಳನ್ನು ತೆಗೆದುಹಾಕುವ ಮೂಲಕ ವಿರೋಧಿ ವಯಸ್ಸಾದ ಏಜೆಂಟ್ ನಟನೆಯನ್ನು, ಊತ ಮತ್ತು ಉರಿಯೂತ ಕಡಿಮೆ, ದುಗ್ಧನಾಳ.

ಮೌಖಿಕವಾಗಿ ಸೇವಿಸುವುದು:

ಹರಳೆಣ್ಣೆಯನ್ನು ಮೌಖಿಕವಾಗಿ ಸೇವಿಸಲು, ಹರಳೆಣ್ಣೆಯನ್ನು ಹಾಲಿಗೆ ಅಥವಾ ಬೆಚ್ಚಗಿನ ನೀರಿಗೆ ಸೇರಿಸಿಕೊಂಡು, ಕುಡಿಯಿರಿ. ಇದ್ರಿಂದಾಗುವ ಉಪಯೋಗಗಳು ಇಂತಿವೆ: ಮಲಬದ್ಧತೆ ನಿವಾರಣೆ, ಶಾಸ್ತ್ರಚಿಕಿತ್ಸೆಗೂ ಮುನ್ನ ಕರುಳುಗಳನ್ನು ಸ್ವಚ್ಛಗೊಳಿಸುವುದು, ಪ್ರಸವ ವೇದನೆ ಶುರುವಾಗುವಂತೆ ಮಾಡುವುದು.

೪. ಹರಳೆಣ್ಣೆಯನ್ನು ಹೇಗೆ ಉಪಯೋಗಿಸಬೇಕು?

ಕೂದಲುದುರುವುದನ್ನು ತಡೆಯಲು ಹರಳೆಣ್ಣೆ:

ಸಾಮಗ್ರಿಗಳು: ಅರ್ಧ ಬಟ್ಟಲು ಹರಳೆಣ್ಣೆ

ವಿಧಾನ: ಸ್ವಲ್ಪ ಹರಳೆಣ್ಣೆಯನ್ನು ನಿಮ್ಮ ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ೧೫ ರಿಂದ ೨೦ ನಿಮಿಷದ ನಂತರ ಹರಳೆಣ್ಣೆಯನ್ನು ನಿಮ್ಮ ಕೂದಲಿನಿಂದ ತೊಳೆದುಕೊಳ್ಳಿ. ಹರಳೆಣ್ಣೆ ದಟ್ಟವಾದ ಎಣ್ಣೆಯಾದ್ದರಿಂದ ನಿಮ್ಮ ಕೂದಲಿನಿಂದ ಇದನ್ನು ಸಂಪೂರ್ಣವಾಗಿ ತೊಳೆದುಕೊಳ್ಳಲು ಸ್ವಲ್ಪ ಕಷ್ಟವೆನಿಸಬಹುದು. 

ಕೂದಲ ಬೆಳವಣಿಗೆಗೆ ಹರಳೆಣ್ಣೆ:

ಕೂದಲಿನ ಬೆಳವಣಿಗೆಯಲ್ಲಿ ಹರಳೆಣ್ಣೆ ತುಂಬಾ ಉಪಯೋಗಕಾರಿ. ಆದರೆ ಇದರ ವಾಸನೆ ಕೆಲವರಿಗೆ ಅತಿ ತೀಕ್ಷ್ಣ ಅನ್ನಿಸಬಹುದು. ಹಾಗನಿಸಿದಲ್ಲಿ, ಹರಳೆಣ್ಣೆಯನ್ನು ಬೇರೆ ಆರೋಗ್ಯಕಾರಿ ಎಣ್ಣೆಯೊಂದಿಗೆ ಸೇರಿಸಿ  ಹಚ್ಚಿಕೊಳ್ಳಿ.ಅದನ್ನು ತಯಾರಿಸಲು ಕುಬ್ಬರಿ ಎಣ್ಣೆ, ಸಿಹಿಯಾದ ಬಾದಾಮಿ ಎಣ್ಣೆ ಮತ್ತು ಹರಳೆಣ್ಣೆಯನ್ನು ಉಪಯೋಗಿಸಬಹುದು. 

ಸಾಮಗ್ರಿಗಳು: ಎಕ್ಸ್ಟ್ರಾ ವರ್ಜಿನ್ ಒಬ್ಬರಿ ಎಣ್ಣೆ, ಸಿಹಿಯಾದ ಬಾದಾಮಿ ಎಣ್ಣೆ, ಎಳ್ಳಿನ ಎಣ್ಣೆ, ಹರಳೆಣ್ಣೆ

ವಿಧಾನ: ನಾಲ್ಕು ಎಣ್ಣೆಗಳನ್ನು ಸೇರಿಸಿ, ನಿಮ್ಮ ನೆತ್ತಿಗೆ ಹಾಗೂ ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಿಕೊಳ್ಳಿ. ೬೦ ನಿಮಿಷಗಳ ನಂತರ ಅದನ್ನು ಶ್ಯಾಂಪೂವಿನ ಸಹಾಯದಿಂದ ತೊಳೆದುಕೊಳ್ಳಿ. 

೫. ಹರಳೆಣ್ಣೆಯ ಪ್ರಯೋಜನಗಳು:

ಹರಳೆಣ್ಣೆ ನಿಮ್ಮ ಕೂದಲಿಗೆ ಒಳ್ಳೆಯದೇ? ನಿಮಗೆ ಸಂಶಯವಿದ್ದರೆ, ಹರಳೆಣ್ಣೆಯಿಂದ ನಿಮ್ಮ ಕೂದಲಿಗೆ ಆಗಬಹುದಾದ ಪ್ರಯೋಜನಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಹರಳೆಣ್ಣೆಯಿಂದ ನಿಮ್ಮ ಕೂದಲಿಗೆ ಹೇರಳವಾದ ಉಪಯೋಗಗಳಿವೆ. ಮುಖ್ಯವಾದ ಉಪಯೋಗಗಳ ಪಟ್ಟಿ ಇಲ್ಲಿದೆ. 

೧. ಕೂದಲ ಬೆಳವಣಿಗೆಗೆ ಹರಳೆಣ್ಣೆ: 

ಹರಳೆಣ್ಣೆ ಯೆಥೇಚ್ಛವಾಗಿ ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಹರಳೆಣ್ಣೆಯಿಂದ ನಿತ್ಯ ನಿಮ್ಮ ಕೂದಲಿಗೆ ಮಸಾಜ್ ಮಾಡಿದಾಗ, ದಟ್ಟವಾದ ಕೂದಲನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹರಳೆಣ್ಣೆ ಕೂದಲಿನ ಕಿರುಚೀಲಗಳಿಗೆ ಸೂಕ್ತ ರಕ್ತ ಸಂಚಲಿಸುವಂತೆ ಮಾಡುತ್ತದೆ. ಇದರಿಂದ ಕೂದಲ ಬೆಳವಣಿಗೆಗೆ ಅನುಕೂಲ. ಈ ಪ್ರಯೋಜನದ ಜೊತೆ ಕೂದಲಿಗೆ ಇನ್ನು ಹಲವಾರು ಪ್ರಯೋಜನಗಳನ್ನು ಹರಳೆಣ್ಣೆ ಮಾಡುತ್ತದೆ - ಒಡಕು ತುದಿಗಳನ್ನು ಕಡಿಮೆಗೊಳಿಸುವುದು, ಕೂದಲು ತುಂಡಾಗುವಿಕೆಯನ್ನು ತಡೆಯುವುದು, ಕೂದಲಿನ ಆರ್ದ್ರತೆ ಹೆಚ್ಚಿಸುವುದು. 

೨. ಕೂದಲುದುರುವಿಕೆ ತಡೆಗಟ್ಟುವಿಕೆ: 

ಹರಳೆಣ್ಣೆಯಲ್ಲಿ ರಿಸಿನೋಲಿಕ್ ಆಸಿಡ್ ಇದೆ. ಈ ಅಂಶವು ನೆತ್ತಿಯಲ್ಲಿ ರಕ್ತ ಸಂಚಲನ ಹೆಚ್ಚಿಸಿ, ನಿಮ್ಮ ಕೂದಲಿನ ಕಿರುಚೀಲದ ಆರೋಗ್ಯವನ್ನು ಸುಧಾರಿಸುತ್ತದೆ. ಇದರಿಂದ ಕೂದಲುದುರುವಿಕೆ ಕಡಿಮೆಗೊಳ್ಳುತ್ತದೆ. 

೩. ಹರಳೆಣ್ಣೆ ಕೂದಲನ್ನು ಬಲಿಷ್ಠಗೊಳಿಸುತ್ತದೆ:

ಕೂದಲ ಕಿರುಚೀಲಗಳಿಗೆ ಮತ್ತು ನೆತ್ತಿಗೆ ರಕ್ತದ ಸಂಚಲನ ಹೆಚ್ಚಿದರೆ, ಕೂದಲು ದಟ್ಟವಾಗಿ ಬೆಳೆಯುತ್ತವೆ. ಹರಳೆಣ್ಣೆ ಕೂದಲಿಗೆ ಆಗಬಹುದಾದ ಎಲ್ಲಾ ಬಗೆಯ ಸೋಂಕುಗಳನ್ನೂ ತಡೆಯುತ್ತದೆ. 

೪. ಅಕಾಲಿಕ ಬಿಳಿ ಕೂದಲನ್ನು ತಡೆಗಟ್ಟುವುದು:

ನೀವು ನಿಮ್ಮ ತಲೆಯಲ್ಲಾಗುತ್ತಿರುವ ಮೊದಲ ಬೆಳೆಯಿ ಕೂದಲನ್ನು ನೋಡಿದ ಕೂಡಲೇ ಹರಳೆಣ್ಣೆಯನ್ನು ಹಚ್ಚಿಕೊಳ್ಳಲು ಶುರು ಮಾಡಿದರೆ, ನಿಮ್ಮ ಕೂದಲು ಇನ್ನೂ ಹೆಚ್ಚು ಬಣ್ಣ ಕಳೆದುಕೊಳ್ಳುವುದನ್ನು ತಡೆಗಟ್ಟಬಹುದು. 

೫. ನೆತ್ತಿಯ ಸೋಂಕನ್ನು ತಡೆಯುತ್ತದೆ:

ನೆತ್ತಿಯಲ್ಲಿ ಸೋಂಕಾದರೆ ಬೇರೆ ತೊಂದರೆಗಳಿಗೆ ಕಾರಣವಾಗಬಹುದು. ಉದಾಹರಣೆಗೆ ಬೊಕ್ಕ ತಲೆ, ಹೊಟ್ಟು, ನವೆಯಿರುವ ನೆತ್ತಿ, ಮುಂತಾದವು. ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಗುಣವಿರುವ ಹರಳೆಣ್ಣೆ ರೋಗಾಣುಗಳ ವಿರುದ್ಧ ಹೋರಾಡಿ, ಸೋಂಕುಗಳನ್ನು ತಡೆಗಟ್ಟುತ್ತದೆ. 

೬. ಕೂದಲಿನ ಕಂಡಿಷನಿಂಗ್:

ಕೂದಲಿನ ಯಾವುದೇ ತೊಂದರೆಗಳಿಂದ ಬಳಲುತ್ತಿದ್ದರೆ, ಹರಳನ್ನೇ ನಿಮಗೆ ಬ್ರಹ್ಮಾಸ್ತ್ರದಂತೆ ಕೆಲಸ ಮಾಡುತ್ತದೆ. ಒರಟು ಮತ್ತು ಹಾನಿಗೊಳಗಾಗಿರುವ ಕೂದಲನ್ನು ಚಿಕಿತ್ಸಿಸಿ, ನಿಮ್ಮ ಕೂದಲು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ಹರಳೆಣ್ಣೆಯಲ್ಲಿರುವ ಹ್ಯುಮೆಕ್ಟೆಂಟ್ ಗುಣವು ಕೂದಲಿನ ಆರ್ದ್ರತೆಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಕೂದಲು ಮೃದುವಾಗಿ, ಸುಂದರವಾಗಿ ಕಾಣುತ್ತದೆ. 

೭. ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ:

ಹರಳೆಣ್ಣೆಯಲ್ಲಿರುವ ರಿಸಿನೋಲಿಕ್ ಆಸಿಡ್, ಒಮೇಗಾ-೬, ಒಮೇಗಾ-೯ ಫ್ಯಾಟಿ ಆಸಿಡ್ಸ್ ಎಣ್ಣೆ ಒಳಹೋಗಿ ಕೂದಲಿನ ಬೇರಿನಲ್ಲಿ ಆರೈಕೆ ಮಾಡುತ್ತದೆ. ಇದರಿಂದಾಗಿ ನಿಮ್ಮ ಕೂದಲಿನ ಆರೋಗ್ಯ ಪೋಷಣೆ ಮಾಡುವಲ್ಲಿ ಹರಳೆಣ್ಣೆ ತುಂಬಾ ಉಪಯುಕ್ತ. 

೮. ಹೊಟ್ಟು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ:

ತಲೆಯಲ್ಲಿನ ಹೊಟ್ಟು ಯಾವುದಾದರೂ ಒಂದು ಅಂತರ್ನಿಹಿತ ಕಾರಣದಿಂದಾಗಿರುತ್ತದೆ (ಉದಾಹರಣೆಗೆ: ಎಣ್ಣೆಯುಕ್ತ ನೆತ್ತಿ). ಸೂಕ್ಶ್ಮಾಣುಜೀವಿಗಳ ವಿರುದ್ಧ ಹೋರಾಡುಅ ಗುಣ ಹೊಂದಿರುವ ಹರಳೆಣ್ಣೆ ಈ ರೀತಿಯ ಯಾವುದೇ ತೊಂದರೆಯನ್ನು ತೊರೆದು ಹಾಕುವಲ್ಲಿ ಸಹಾಯ ಮಾಡುತ್ತದೆ. 

೯. ಕೂದಲಿನ ಒಡಕು ತುದಿಗಳನ್ನು ತಡೆಯುತ್ತದೆ:

ಕೂದಲೆಳೆಯ ಕೆರಾಟಿನ್ ನಲ್ಲಿ ತುಂಡುಗಳಿದ್ದರೆ, ಒಡಕು ತುದಿ ಅಥವಾ ಕೂದಲು ತುಂಡಾಗುವಿಕೆಯಂತಹ ತೊಂದರೆಗಳು ಕಂಡುಬರುತ್ತವೆ. ಇದರಿಂದಾಗಿ ಕೂದಲಿನ ಕರ್ಷಕ ಶಕ್ತಿ ಕಡಿಮೆಗೊಳ್ಳುತ್ತದೆ. ಆದರೆ ಹರಳೆಣ್ಣೆ ಉಪಯೋಗಿಸುವುದರಿಂದ ಕೂದಲಿನ ಒಡಕುಗಳನ್ನು ತಡೆದು, ಕೂದಲ ತುಂಡಾಗುವಿಕೆಯನ್ನೂ ತಡೆಯಬಹುದು. 

೧೦. ದಟ್ಟವಾದ ಕೂದಲಿಗೆ ಹರಳೆಣ್ಣೆ: 

ಹರಳೆಣ್ಣೆ ಅದ್ಭುತ ಉಪಯೋಗಗಳನ್ನು ಹೊಂದಿದೆ. ಹರಳೆಣ್ಣೆ ಕೂದಲಿನ ಹೊರ ಪದರದಲ್ಲಿ ಪಸರಿಸಿ ಕೂದಲಿನ ಉದುರುವಿಕೆ ತಡೆಗಟ್ಟಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಿ, ಕೂದಲಿನ ದಟ್ಟತೆಯನ್ನು ಹೆಚ್ಚಿಸುತ್ತದೆ. 

೧೧. ಕೂದಲಿಗೆ ಗಾಢ ಬಣ್ಣ ನೀಡುತ್ತದೆ: 

ನಿಮ್ಮ ಕೂದಲಿನ ಬಣ್ಣ ಗಾಢವಾಗಬೇಕೇ? ಹರಳೆಣ್ಣೆ ಉಪಯೋಗಿಸಲು ಶುರು ಮಾಡಿ. ಅದರಲ್ಲಿರುವ ಹ್ಯುಮೆಕ್ಟೇನ್ಟ್ ಗುಣವು ಕೂದಲಿನಲ್ಲಿ ಆರ್ದ್ರತೆಯನ್ನು ಕಾಪಾಡಿ, ಕೂದಲಿನ ಬಣ್ಣದ ಗಾಢತೆಯನ್ನು ಹೆಚ್ಚಿಸುತ್ತದೆ. 

೧೨. ಹರಳೆಣ್ಣೆ ನೈಸರ್ಗಿಕ ಎಣ್ಣೆಯನ್ನು ಮತ್ತೆ ಭರ್ತಿ ಮಾಡುತ್ತದೆ:

ನಿಮ್ಮ ನೆತ್ತಿ ನಿಮ್ಮ ಕೂದಲಿನ ಆರೋಗ್ಯಕ್ಕಾಗಿ ನೈಸರ್ಗಿಕ ತೈಲವನ್ನು ಉತ್ಪಾದಿಸುವ ಗುಣವನ್ನು ಹೊಂದಿರುತ್ತದೆ. ಹರಳೆಣ್ಣೆ ಈ ನೈಸರ್ಗಿಕ ತೈಲವನ್ನು ಭರ್ತಿ ಮಾಡುತ್ತದೆ.

೧೩. ಕೂದಲಿಗೆ ಹಾನಿಯಾಗದಂತೆ ತಡೆಯುತ್ತದೆ:

ಹರಳೆಣ್ಣೆಯಲ್ಲಿ ಫ್ಯಾಟಿ ಆಸಿಡ್ಸ್ ಇರುತ್ತವೆ. ಈ ಫ್ಯಾಟಿ ಆಸಿಡ್ ಗಳು ಒಂದು ಸಂರಕ್ಷಣಾ ಕವಚವನ್ನು ನಿಮ್ಮ ಕೂದಲಿನ ಸುತ್ತ ನಿರ್ಮಿಸುತ್ತದೆ. ಸೂರ್ಯ ಅಥವಾ ರಾಸಾಯಾನಿಕಗಳಿಂದ  ನಿಮ್ಮ ಕೂದಲಿಗೆ ಆಗಬಹುದಾದ ಹಾನಿಯನ್ನು ಹರಳೆಣ್ಣೆಯ ರಕ್ಷಾಕವಚ ತಪ್ಪಿಸುತ್ತದೆ. 

೧೪. ಹರಳೆಣ್ಣೆಯಿಂದ ಹೊಳೆಯುವ ಕೂದಲು:

ಹರಳೆಣ್ಣೆ ಕೂದಲೆಳೆಯ ಸುತ್ತ ರಕ್ಷಾಕವಚ ನಿರ್ಮಿಸುವುದರಿಂದ, ಅದರ ಮೇಲೆ ಬೀಳುವ ಬೇಕ್ಲಕಿನ ಕಿರಣಗಳು ಪ್ರತಿಫಲಿಸಿ ನಿಮ್ಮ ಕೂದಲು ಹೊಳೆಯುವಂತೆ ಕಾಣುತ್ತದೆ. 

೧೫. ಹರಳೆಣ್ಣೆ ನಿಮ್ಮ ಕೂದಲಿನ pH ಸಮತೋಲನದಲ್ಲಿರಿಸುತ್ತದೆ:

ಹರಳೆಣ್ಣೆಯಲ್ಲಿ ನಿಮ್ಮ ನೆತ್ತಿಯ pH ಸಮತೋಲನದಲ್ಲಿರಿಸುವ ಸಾಮರ್ಥ್ಯವಿದ್ದು, ಹೊಟ್ಟಿನಂತಹ ಸಮಸ್ಯೆಗಳಿಗೆ ಅನಾನುಕೂಲ ವಾತಾವರಣ ನಿರ್ಮಿಸುತ್ತದೆ. 

ಹರಳೆಣ್ಣೆಯನ್ನು ನಿಮ್ಮ ಕೇಶಕ್ಕೆ ಬಳಸುವುದರಿಂದ ಅನೇಕ ಅದ್ಭುತ ಪ್ರಯೋಜನಗಳಿವೆ. ಅದರೊಂದಿಗೆ ಹಲವಾರು ಆರೋಗ್ಯ ಪ್ರಯೋಜನಗಳೂ ಇವೆ. ಅದನ್ನು ಅನುಭವಿಸಲು ಇಂದೇ ಹರಳೆಣ್ಣೆ ಉಪಯೋಗಿಸಲು ಶುರು ಮಾಡಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon