Link copied!
Sign in / Sign up
12
Shares

೧೫ ತಿಂಗಳ ಮಗುವಿಗೆ ಶಿಶು ಆಹಾರ

ನಿಮ್ಮ ಮಗುವಿಗೆ ಒಂದು ವರ್ಷ ತುಂಬಿದ ನಂತರ, ನಿಮ್ಮ ಮಗುವಿನ ಆಹಾರ ಕ್ರಮವನ್ನು ಬದಲಾಯಿಸುವುದು ತುಂಬಾ ಪ್ರಮುಖವಾಗುತ್ತದೆ. ನಿಧಾನವಾಗಿ ನಿಮ್ಮ ಮಗುವನ್ನು ಗಮನಿಸಿ ಮತ್ತು ಮಗುವಿಗೆ ಬೇಕಿರುವ ಅಗತ್ಯಗಳನ್ನು ನೀಡುವುದರಿಂದ, (ಸರಿಯಾದ ಆಹಾರ ಕ್ರಮವನ್ನು ಅವನ ಅಗತ್ಯಕ್ಕೆ ತಕ್ಕಂತೆ ಕಾಲ ಕ್ರಮೇಣ ಅನುಸರಿಸುವುದು) ನಿಮ್ಮ ಮಗುವಿನ ಆರೋಗ್ಯಕರ ಬೆಳೆವಣಿಗೆಗೆ ಸಹಾಯವಾಗುತ್ತದೆ. ನಿಮ್ಮ ಆಹಾರ ಕ್ರಮದಲ್ಲಿ ಬದಲಾದಾಗ, ಮಗುವಿಗೆ ಅಲರ್ಜಿ ಅಥವಾ ತುರಿಕೆ ಏನಾದರೂ ಆಗುತ್ತಿದೆಯೇ ಎಂಬುದನ್ನು ಗಮನಿಸಿ. ನೀವು ಎಷ್ಟು ಬೇಗ ಅದನ್ನು ಗಮನಿಸುವಿರಿ, ಅಷ್ಟು ಬೇಗ ಅದನ್ನು, ಅದಕ್ಕೆ ಏನು ಕಾರಣ ಎಂಬುದನ್ನು ತಿಳಿದು ಸರಿಪಡಿಸಬಹುದು.

೧. ಹಣ್ಣು ಮತ್ತು ತರಕಾರಿಗಳು

ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ಮಗುವಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುವ ಹಲವಾರು ಪೌಷ್ಟಿಕ ಅಂಶಗಳನ್ನು ಹೊಂದಿವೆ. ಅವುಗಳು ರಕ್ತದ ಜೀವಕೋಶಗಳನ್ನು ಅಭಿವೃದ್ದಿ ಪಡಿಸುವಲ್ಲಿ, ಮೂಳೆಯನ್ನು ಬಲಿಷ್ಠ ಮಾಡುವಲ್ಲಿ, ಚರ್ಮದ ಸಮಸ್ಯೆ ಮತ್ತು ಅಸ್ವಸ್ಥೆಗಳನ್ನು ನಿವಾರಿಸುವಲ್ಲಿ ಸಹಕರಿಸುತ್ತವೆ. ಉತ್ತಮ ಆರೋಗ್ಯವನ್ನು ತರುವಂತಹ ಸಾಕಷ್ಟು ಹಸಿರು ಮತ್ತು ವರ್ಣರಂಜಿತ ಹಣ್ಣುಗಳನ್ನು ನೀವು ಸೇವಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

೨. ಗೋಧಿ

ನಿಮ್ಮ ಮಗುವಿನ ಆಹಾರದಲ್ಲಿ ಗೋಧಿಯನ್ನು ಸೇರಿಸುವುದು ನಿಮ್ಮ ಮಗುವಿಗೆ ಅಗತ್ಯವಾದ ಫೈಬರ್ ಅನ್ನು ಒದಗಿಸಲು ಒಂದು ಉತ್ತಮ ವಿಧಾನವಾಗಿದೆ. ಮಗುವಿನ ವಿಸರ್ಜನೆ ವ್ಯವಸ್ಥೆಯನ್ನು ಅಭಿವೃಧಿ ಪಡಿಸುವಲ್ಲಿ ಫೈಬರ್ ಮುಖ್ಯ ಪಾತ್ರವಹಿಸುತ್ತದೆ. ಮಲಬದ್ಧತೆಯ ನೋವಿನಿಂದ ಅದು ನಿಮ್ಮ ಮಗುವನ್ನು ಆರಾಮಗೊಳಿಸುತ್ತದೆ. ಇದು ನಿಮ್ಮ ಮಗುವಿನ ದೈಹಿಕವಾಗಿ ಪುಷ್ಟಿ ನಿಡುವುದಕ್ಕೂ ಸಹಕಾರಿ.

೩. ಪ್ರೋಟಿನ್ ಮತ್ತು ಕೊಬ್ಬಿನಾಂಶ

ನಿಮ್ಮ ಮಗು ಬೆಳೆಯುತ್ತಿರುವ ಕಾರಣ, ಅದರ ಆಹಾರ ಕ್ರಮಕ್ಕೆ ಪ್ರೋಟಿನ್ ಮತ್ತು ಕೊಬ್ಬಿನಾಂಶವನ್ನು ಸೇರಿಸುವುದು ಒಳ್ಳೆಯದು. ನಿಮ್ಮ ಮಗುವಿನ ಮಿದುಳಿನ ಕೋಶಗಳ ಉತ್ತಮ ಬೆಳವಣಿಗೆಯಲ್ಲಿ ಇವು ಸಹಕಾರಿಯಾಗುತ್ತವೆ. ಇದು ನಿಮ್ಮ ಮಗುವಿನ ದೈಹಿಕ ಚಟುವಟಿಕೆಗಳಿಗೆ ಶಕ್ತಿ ನೀಡುತ್ತದೆ. ಅಕ್ಕಿ ಮತ್ತು ಆಲೂಗಡ್ಡೆಯಲ್ಲಿರುವ ಕಾರ್ಬೋಹೈಡ್ರೆಟ್ಸ್ ಗಳನ್ನು ನೀಡುವುದು ಆರೋಗ್ಯಕರ ಜೊತೆಗೆ ನಿಮ್ಮ ಮಗುವಿಗೆ ಶಕ್ತಿ ಬರುತ್ತದೆ. ಅವು ಆಸಕ್ತಿದಾಯಕ ಆಹಾರ ಪದಾರ್ಥಗಳು ಕೂಡ ಹೌದು.

೪. ಹಾಲಿನ ಉತ್ಪನ್ನಗಳು

ಹಾಲು, ಗಿಣ್ಣು(ಚೀಸ್), ಕಾಟೇಜ್ ಚೀಸ್ (ಪನ್ನೀರು), ಕ್ರೀಮ್, ಮತ್ತು ಮೊಸರು ಪ್ರಮುಖ ಪೋಷಕಾಂಶಗಳಾಗಿವೆ, ಇದು ನಿಮ್ಮ ಮಗುವಿಗೆ ಗಟ್ಟಿಯಾದ ಅಸ್ಥಿಪಂಜರದ ರಚನೆಗಾಗಿ ಕ್ಯಾಲ್ಸಿಯಂ ಸೇವನೆಯ ಅಗತ್ಯವಿದೆ, ಅದನ್ನು ಇವು ಒದಗಿಸುತ್ತವೆ.

ಈ ಪದಾರ್ಥಗಳ ಸಮೃದ್ಧಿಯನ್ನು ಹೊಂದಿರುವ ಕೆಲವು ಆಹಾರ ಪದಾರ್ಥಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

೧. ಬೆಣ್ಣೆ ಮತ್ತು ಸ್ವಲ್ಪ ಜೇನು ಹಾಕಿದ ಗೋಧಿ ದೋಸೆ

೨. ಎಲ್ಲಾ ತರಹದ ಗಂಜಿ(ಬೀಟ್ರೂಟ್ ಮತ್ತು ಕ್ಯಾರೆಟ್ ಅದರಲ್ಲಿ ಉತ್ತಮವಾದುದು).

ವರ್ಣರಂಜಿತ ಆಹಾರಗಳು ಮಕ್ಕಳನ್ನು ಆಕರ್ಷಿಸುವುದರಿಂದ ಅವರು ಅದನ್ನು ರುಚಿ ನೋಡಲು ಬಯಸುತ್ತಾರೆ.

೩. ಕಿಚಿಡಿ

೪. ಮೊಸರು ಓಟ್ಸ್

ನಿಮ್ಮ ಮಕ್ಕಳ ಮುಂದಿರುವ ಆಹಾರವನ್ನು ಅವರು ತಿನ್ನುವಂತೆ ಮಾಡಲು:

೧. ಆಹಾರವನ್ನು ವರ್ಣರಂಜಿತವಾಗಿಸಿ, ಅವರು ಅದನ್ನು ನೋಡಿದಾಗ ಅದರ ಬಗ್ಗೆ ಆಸಕ್ತಿ ಮೂಡುವಂತೆ ಅಲಂಕರಿಸಿ, ರುಚಿಕರವಾಗಿರಲಿ. ಅವನು ಆಹಾರವನ್ನು ಆಯ್ಕೆಮಾಡಿಕೊಳ್ಳುವ ವಯಸ್ಸಿನವನಾಗಿರುತ್ತಾನೆ. ಆಹಾರ ಸೇವಿಸಲು ಅವನಿಗೆ ಅವನದೇ ಆದ ಸಮಯ ಮತ್ತು ಸ್ತಳ ನೀಡಿ.

೨. ಮಗುವನ್ನು ಆಹಾರ ಸೇವಿಸಲು ಬಲವಂತ ಪಡಿಸಬೇಡಿ, ಮತ್ತು ಇದನ್ನೇ ತಿನ್ನಬೇಕು ಎಂದು ಒತ್ತಾಯಿಸಬೇಡಿ, ಅವರಿಗೆ ಬೇರೆ ತಿಂಡಿಯ ರುಚಿಯನ್ನು ನೋಡಲು ಬಿಡಿ.

೩. ನಿಮ್ಮ ಮಗುವಿನ ಮುಂದೆ ನೀವು ಆಹಾರ ಸೇವಿಸಿ ಅದರ ಪ್ರಾಮುಖ್ಯತೆ ತಿಳಿಸಿ. ಮಗುವು ಆಹಾರ ನೋಡಿದ ಕೂಡಲೇ ಅದರ ಹತ್ತಿರ ಬರುವಂತೆ ಅಲಂಕರಿಸಿ, ಆಗ ಮಗುವಿಗೆ ಆಹಾರವು ಆಸಕ್ತಿದಾಯಕವಾಗುತ್ತದೆ.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon