Link copied!
Sign in / Sign up
62
Shares

೧೨ ತಿಂಗಳುಗಳ ವರೆಗಿನ ಮಕ್ಕಳ ಬೆಳವಣಿಗೆಯ ಸಂಪೂರ್ಣ ಮಾಹಿತಿ !

ಮೊದಲ ವರ್ಷದಲ್ಲಿ ನಿಮ್ಮ ಮಗುವಿನ ಬೆಳವಣಿಗೆ ಶರವೇಗದಲ್ಲಿ ಸಾಗುತ್ತದೆ. ಈ ಸಮಯದಲ್ಲಿ ಮಗುವಿನ ಬೆಳವಣಿಗೆಯ ವೇಗ ಗರಿಷ್ಟವಾಗಿದ್ದು, ನೀವು ನೋಡ ನೋಡುತ್ತಿದ್ದಂತೆ ಅಂಬೆಗಾಲಿಡಲು ಶುರು ಮಾಡಿಬಿಡುತ್ತದೆ. ಉತ್ತಮ ಬೆಳವಣಿಗೆಗೆ ಪೂರಕವಾದ ಪೋಷಕಾಂಶಗಳನ್ನು ನೀಡಬೇಕಾಗಿದ್ದು, ಈ ಮೊದಲ ವರ್ಷ ಬೆಳವಣಿಗೆಯ ಹಂತದಲ್ಲಿ ಅತಿಮುಖ್ಯವಾದ ಪಾತ್ರವಹಿಸುತ್ತದೆ.

ನಿಮ್ಮ ಮಗುವಿನ ಬೆಳವಣಿಗೆಯ ಬಗ್ಗೆ ತಿಳಿಯಲಿಕ್ಕೆ ಈ ಲೇಖನ ಮಾರ್ಗದರ್ಶಿ ಆಗಲಿದೆ.

೧. ೧-೪ ತಿಂಗಳು

ನಿಮ್ಮ ಮಗುವಿನ ಮೊದಲ ತಿಂಗಳ ಬೆಳವಣಿಗೆ ಕೇವಲ ಎದೆಹಾಲು ಸೇವಿಸುವುದು ಹಾಗು ಮಲಗುವುದನ್ನು ಕೂಡಿರುತ್ತದೆ. ಅವರು ಸಣ್ಣದಾದರೂ , ಮುಖ್ಯವಾದಂತಹ ಚಲನವಲನಗಳನ್ನು ಪ್ರದರ್ಶಿಸುತ್ತಾರೆ. ಅವುಗಳೆಂದರೆ ನಿಮ್ಮ ಮುಖವನ್ನು ನೋಡುವುದು, ನಗುವುದು ಹಾಗು ನಿಮ್ಮ ಬೆರಳನ್ನು ಹಿಡಿದುಕೊಳ್ಳುವುದು. ಜೋರಾದ ಶಬ್ದ  ಅಥವಾ ಗದರಿಕೆ ಕೇಳಿದೊಡನೆ ಅವರು ಅಳುತ್ತಾರೆ.ಹೊಟ್ಟೆ ಕೆಳಗೆ ಮಾಡಿ ಮಲಗಿದಾಗ, ತಮ್ಮ ತಲೆಯನ್ನು ಮೇಲೆ ಎತ್ತುತ್ತಾರೆ. ಇವೆಲ್ಲವೂ ಆಂತರಿಕ ಬೆಳವಣಿಗೆಯನ್ನು ಸೂಚಿಸುವುದಲ್ಲದೆ, ನಿಮ್ಮ ಮಗುವಿನ ಬೆಳವಣಿಗೆ ಆರೋಗ್ಯಕರವಾಗಿದೆ ಎಂಬುದನ್ನು ಸೂಚಿಸುತ್ತದೆ. ಇವೆಲ್ಲಾ ಪ್ರತಿಫಲಿತ ಕಾರ್ಯಗಳು ಮಗುವಿನ ಮುಂದಿನ ಬೆಳವಣಿಗೆಗೆ ಅಗತ್ಯ.

೨. ೪-೮ ತಿಂಗಳು

ಮೊದಲ ವರ್ಷದ ಬೆಳವಣಿಗೆಯ ಮುಂದಿನ ಹಂತದಲ್ಲಿ ಮಗುವು ಅನೇಕ ಮುಖ ಭಾವಗಳನ್ನು ಪ್ರದರ್ಶಿಸುತ್ತದೆ. ನಿಮ್ಮ ಮಗುವಿನ ಬೆಳವಣಿಗೆಯ ಅತ್ಯಂತ ಮುದ್ದಾದ ಸಮಯವಿದು. ನಿಮ್ಮ ಮಗುವಿನ ಮನಮುಟ್ಟುವ ಮುಖಭಾವಗಳು, ಅದು ಏನು ಹೇಳಲು ಬಯಸುತ್ತಿದೆ ಎಂದು ತಿಳಿಸುತ್ತದೆ. ನಿಮ್ಮ ಮಗು ಅಂಗಾತ ಮಲಗಿದಾಗ ಕಾಲನ್ನು ಜಾಡಿಸುವುದರ ಥರ ಅದರ ಕಾಲುಗಳೊಂದಿಗೆ ಆಟ ಆಡಲು ಶುರು ಮಾಡುತ್ತದೆ. ಹಾಸಿಗೆ ಮೇಲೆ ಉರುಲಾದುವುದು ನಿಮ್ಮ ಮಗುವಿನ ನೆಚ್ಚಿನ ಸಮಯ ಕಳೆಯುವ ದಾರಿ. ಎತ್ತರದಿಂದ ಬೀಳುವ ಅಪಾಯ ಇಲ್ಲದಂತೆ, ಒಂದು ಕಡೆ ಚಾಪೆಯನ್ನು ಹಾಸಿ ನಿಮ್ಮ ಮಗುವನ್ನು ಅಲ್ಲಿ ಆಟ ಆಡಲು ಬಿಡಿ. ಆಕರ್ಷಕವಾದ ಆತಿಕೆಗಳಿಗೆ ಮುಗಿಬೀಳುವುದು ಹಾಗು ಅವುಗಳನ್ನು ಹಿಡಿಯುವುದು ನಿಮ್ಮ ಮಗುವಿನ ಬೆಳವಣಿಗೆಯ ಈ ಹಂತದ ಮುಖ್ಯ ಅಂಶ.ಅಪಾಯಕಾರಿ ವಸ್ತುಗಳನ್ನು ಅವರ ಕೈಗೆ ಎಟುಕದಂತೆ ಇಡಿ.ಇಲ್ಲವಾದರೆ ಮಕ್ಕಳು ಅದನ್ನು ಬಾಯಲ್ಲಿ ಇಟ್ಟುಕೊಳ್ಳುವರು.ತೆವಳುತ್ತಾ ಮನೆಯಲ್ಲಾ ಸುತ್ತುವುದು, ಈ ಹಂತದಲ್ಲಿ ಅವರು ಸಾಧಿಸುವ ಕಾರ್ಯ.

೩. ೮-೧೨ ತಿಂಗಳು

ಈ ಹಂತದಲ್ಲಿ, ನಿಮ್ಮ ಮಗು ಅಂಬೆಗಾಲು ಇಡುವ ಹೊಸ್ತಿಲಿನಲ್ಲಿ, ಈ ಬೆಳವಣಿಗೆಗಳ ಮೇಲೆ ಗಮನವಿಡಿ. ಈಗ ನಿಮ್ಮ ಮಗುವಿಗೆ ಗಟ್ಟಿಯಾದ ಆಹಾರವನ್ನು ನೀಡಬಹದು. ಮಗುವಿನ ಆಹಾರ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಹಾಗು ಅವರು ಕಕ್ಕುವ ಸಾಧ್ಯತೆಗಳ ಬಗ್ಗೆ ಗಮನವಿಡಿ. ನಿಮ್ಮ ಮಗು ನಡೆಯುವುದಕ್ಕೆ ಪ್ರಯತ್ನಿಸುವುದನ್ನು ನೀವು ಕಾಣಬಹುದು ಹಾಗು ನಿಮ್ಮ ಸಹಾಯದೊಂದಿಗೆ ಅವರು ನಿಲ್ಲಬಹುದು. ಮಕ್ಕಳಿಗೆ ನಾವು ಕೇಳುವ ಪ್ರಶ್ನೆಗಳಿಗೆ ಅವರು ಮಾಡುವ ಕೆಲವು ಸರಳ ಶಬ್ದಗಳೇ ಈ ಹಂತದ ಅವರ ಗರಿಷ್ಟ ಸಾಧನೆ. ಬೆರಳು ಆಹಾರವೇ ನಿಮ್ಮ ಮಗುವಿನ ಬೆಳವಣಿಗೆಯ ಪ್ರಬುಧ್ಹ ಭಾಗ.ಅವರು ರುಚಿ ನೋಡಿ ತಿನ್ನುವುದನ್ನು ನಿರ್ಧರಿಸುವುದರು ಹಾಗು ಇದರಿಂದ ತಮಗೆ ಬೇಡದ್ದನ್ನು ದೂರಸರಿಸುವುದಕ್ಕೆ ಕಲಿಯುತ್ತಾರೆ.

 

Click here for the best in baby advice
What do you think?
88%
Wow!
13%
Like
0%
Not bad
0%
What?
scroll up icon