Link copied!
Sign in / Sign up
13
Shares

ವೀಕ್ಷಿಸಿ: ಈತನ ಕಣ್ಣಿನಲ್ಲಿ ಇದ್ದದ್ದು ಬರೊಬ್ಬರಿ 12 ಸೆಮೀ ಹುಳ!ಹೊರತೆಗೆದಿದ್ದು ನೋಡಿದರೆ ಬೆಚ್ಚಿಬೀಳುತ್ತೀರ!

ನೀವು ಚಿತ್ರ-ವಿಚಿತ್ರ ಕಾಯಿಲೆಗಳ ಬಗ್ಗೆ , ಅಸ್ವಸ್ಥತೆಗಳ ಬಗ್ಗೆ ಕೇಳಿರುತ್ತೀರಾ, ಓದಿರುತ್ತೀರಾ ಮತ್ತು ನೋಡಿರುತ್ತೀರಾ. ಆದರೆ ಇಲ್ಲಿ ನೋಡಲಿರುವ ದೃಶ್ಯವು ನೀವು ಅರಗಿಸಿಕೊಳ್ಳುವುದಕ್ಕೆಯೇ ಕಷ್ಟ ಪಡುತ್ತೀರಾ. ಅಂದಹಾಗೆ ಇದು ನಡೆದದ್ದು ಮುಂಬೈ ನಗರದಲ್ಲಿ. ಈ ದೃಶ್ಯದಲ್ಲಿರುವ ಕಣ್ಣು ಕೃಷ್ಣಮೂರ್ತಿ ಎಂಬ ವ್ಯಕ್ತಿಯದ್ದು. ಈತನಿಗೆ ಕೆಲವು ದಿನಗಳ ಹಿಂದಿನಿಂದ ಕಣ್ಣಿನಲ್ಲಿ ತುರಿಕೆ ಮತ್ತು ಇರಿಸುಮುರಿಸು ಕಾಣಿಸಿಕೊಂಡಿದೆ. ಆದರೆ ಅದಕ್ಕೆ ಕಾರಣ ಏನೆಂಬುದು ಈತ ಕನಸು ಮನಸ್ಸಿನಲ್ಲೂ ಊಹಿಸರಲು ಸಾಧ್ಯವಿರಲಿಲ್ಲ.

ಆಸ್ಪತ್ರೆಯಲ್ಲಿ ವೈದ್ಯರು ಈತನ ಕಣ್ಣನ್ನು ಪರೀಕ್ಷಿಸಿದಾಗ, ಈತನ ಕಣ್ಣಿನಲ್ಲಿ ಕಾಣಿಸಿಕೊಂಡಿದ್ದು ಬರೋಬ್ಬರಿ 12.5 ಸೆಂಟಿಮೀಟರ್ ಅಷ್ಟು ಉದ್ದದ ಹುಳ. ಈತನನ್ನ ತಪಾಸಣೆಗೆ ಒಳಪಡಿಸಿದ ವೈದ್ಯರಾದ ಡಾ ।। ಎಸ್. ನಾರಾಯಣಿ ಇದೊಂದು ಬಹಳ ವಿರಳವಾದ ಪ್ರಕರಣ ಆಗಿದ್ದು, ಈ ಹುಳು ಆತನ ಮೆದುಳು ಇನ್ನೂ ಸೇರಿಲ್ಲ ಎಂಬುದೇ ಒಂದು ಅದೃಷ್ಟಕರ ಸಂಗತಿ ಎಂದು ತಿಳಿಸಿದರು.


ನಂತರ ನಾರಾಯಣಿ ಅವರು ಫೋರ್ಟಿಸ್ ಆಸ್ಪತ್ರೆಯ ಕಣ್ಣಿನ ತಜ್ಞರಾದ ಸೀತಾರಾಮನ್ ಅವರನ್ನ ಸಂಪರ್ಕಿಸಿ ಅವರ ಸಹಾಯ ಕೇಳಿಕೊಂಡರು. ಆಗ ಸೀತಾರಾಮನ್ ಅವರು ಕೃಷ್ಣಮೂರ್ತಿಯ ಕಣ್ಣಿನ ಮೇಲೆ ಒಂದು ಮೈನರ್ ಸರ್ಜರಿ ನಡೆಸಿ, ಆ ಹುಳುವನ್ನು ಕಣ್ಣಿನಿಂದ ಆಚೆಗೆ ಹೊರತೆಗೆದರು. ಸೀತಾರಾಮನ್ ಪ್ರಕಾರ ಈ ಹುಳು ಇನ್ನೂ ಸ್ವಲ್ಪ ದಿನ ಹಾಗೆಯೇ ಕಣ್ಣಿನಲ್ಲಿ ಉಳಿದುಕೊಂಡಿದ್ದರೆ, ಅದು ಮೆದುಳಿಗೆ ತಲುಪಿ ರೋಗಿಯ ಸ್ತಿಥಿಯನ್ನ ಮತ್ತಷ್ಟು ಚಿಂತಾಜನಕ ಮಾಡುತ್ತಿತ್ತು ಎನ್ನುತ್ತಾರೆ.

ನಾರಾಯಣಿ ಅವರು “ಇದೇನೂ ಹಿಂದೆಂದೂ ಆಗಿರದ ಪ್ರಕರಣ ಎಂದಲ್ಲ, ಆದರೆ ಇದು ಕಾಣಿಸಿಕೊಳ್ಳುವುದು ತುಂಬಾನೇ ಅಪರೂಪ. ಈ ಹುಳು ಅದು ಹೇಗೋ ಮಾನವನ ರಕ್ತದಲ್ಲಿ ಸೇರಿಕೊಂಡು ಬೆಳೆಯಲು ಶುರು ಮಾಡುತ್ತದೆ” ಎಂದರು. ಈ ಹುಳುವನ್ನ ಲೋವಾ ಲೋವಾ ಹುಳು ಎನ್ನುತ್ತಾರೆ ಮತ್ತು ಇದು ಕಾಣಿಸಿಕೊಳ್ಳುವುದು ಪಾಶ್ಚಾತ್ಯ ಆಫ್ರಿಕಾದಲ್ಲಿ. ಇದು ಕೆಲವೊಂದು ಕೀಟಗಳಿಂದ ಮನುಶ್ಯನ ದೇಹ ಸೇರಬಹುದು. ಇದು ಕಣ್ಣು, ಹೃದಯ, ಶ್ವಾಸಕೋಶ ಮತ್ತು ಚರ್ಮದ ಕೆಳಗಡೆ ಯಾವ ಭಾಗಕ್ಕಾದರೂ ಸಂಚರಿಸಬಹುದು.

ಈ ಹುಳುವನ್ನು ಕೃಷ್ಣಮೂರ್ತಿ ಕಣ್ಣಿನಿಂದ ಸರ್ಜರಿ ಮೂಲಕ ಹೊರತೆಗೆದ ದೃಶ್ಯವನ್ನ ನೀವಿಲ್ಲಿ ಕಾಣಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon