Link copied!
Sign in / Sign up
3
Shares

ನಿಮ್ಮ ಸೌಂದರ್ಯ ನಿಯತಕ್ರಮದಲ್ಲಿ ಜೇನುತುಪ್ಪ ಬಳಸಲು 10 ಆಸಕ್ತಿದಾಯಕ ಮಾರ್ಗಗಳು (10 Interesting Ways To Use Honey In Your Beauty Routine In Kannada)

ಅನೇಕ ಸಂಪ್ರದಾಯಗಳಲ್ಲಿ ಜೇನುತುಪ್ಪವನ್ನು ಅಮೃತ ಎಂದು ಪರಿಗಣಿಸಲಾಗುತ್ತದೆ. ಈಜಿಪ್ಟ್ ರಾಣಿ ಕ್ಲಿಯೋಪಾತ್ರಳ ಸೌಂದರ್ಯ ರಹಸ್ಯಗಳಲ್ಲಿ ಒಂದು - ಜೇನು ಮತ್ತು ತಾಜಾ ಹಾಲಿನಿಂದ ಸ್ನಾನ ಮಾಡುತ್ತಿದ್ದದ್ದು. ಸಾವಯವ ಜೇನು ಆಂಟಿ-ಆಕ್ಸಿಡಂಟ್ ಗಳಿಂದ ಕೂಡಿರುವ ನೈಸರ್ಗಿಕ ಹ್ಯೂಮಕ್ಟಂಟ್ ಆಗಿದೆ. ಉರಿಯೂತದ, ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣಲಕ್ಷಣಗಲಿಂದ ಹೆಸರುವಾಸಿಯಾಗಿರುವ ಜೇನುತುಪ್ಪದ ನೈಸರ್ಗಿಕ ಉತ್ಪನ್ನಗಳನ್ನು ಬಳಸುವವರಿಗೆ ಅಚ್ಚುಮೆಚ್ಚು. ಆಸ್ಥೆ ಅಲ್ಲದೆ, ಆರೋಗ್ಯಕರ ಚರ್ಮಕ್ಕಾಗಿ ನೈಸರ್ಗಿಕ ಉತ್ಪನ್ನಗಳು ಎಂಬ ವಿಷಯಕ್ಕೆ ಬಂದಾಗ, ಜೇನುತುಪ್ಪ ಮೇಲುಗೈ ಹೊಂದಿದೆ. ಇದು ಹ್ಯೂಮಕ್ಟಂಟ್ ಆಗಿರುವುದರಿಂದ, ಇದು ಆರೋಗ್ಯಕರ ಚರ್ಮಕ್ಕೆ ಪರಿಪೂರ್ಣ ಮಾಯಿಶ್ಚರುಸರ್ ಕೂಡಾ ಆಗಿದೆ.

ಹನಿ ವಿವಿಧ ಉಪಯೋಗಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳುವುದಕ್ಕೂ ಮುನ್ನ, ನೀವು ತಿಳಿದುಕೊಳ್ಳಬೇಕಾದ ವಿಷಯ ಬೇರೆ ಇದೆ. ಮಾರುಕಟ್ಟೆಯಲ್ಲಿ ಕಂಡುಬರುವ ಪ್ರತಿಯೊಂದು ಜೇನುತುಪ್ಪವೂ ಒಳ್ಳೆಯ ಗುಣಮಟ್ಟದ್ದಲ್ಲ. ಜೇನುತುಪ್ಪದ ಸೌಂದರ್ಯ ಪ್ರಯೋಜನಗಳು ಜೇನುತುಪ್ಪದಲ್ಲಿರುವ ಪರಾಗ ಧಾನ್ಯಗಳು, ಉತ್ಕರ್ಷಣ ನಿರೋಧಕಗಳು ಮತ್ತು ಅದರಲ್ಲಿ ಒಳಗೊಂಡಿರುವ ಪೋಷಕಾಂಶಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಆದರೆ ಹಲವು ಪ್ರಕ್ರೀಯೆಗಳ ಮೂಲಕ ಜೇನುತುಪ್ಪವನ್ನು ಸಂಸ್ಕರಿಸಿದರೆ, ಅದು ತನ್ನ ಪೋಷಕಾಂಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಕಚ್ಚಾ ಜೇನು ಮತ್ತು ಸಾವಯವ ಜೇನು ಭಿನ್ನವಾಗಿದೆ. ಕಚ್ಚಾ ಜೇನುತುಪ್ಪವು ಶುದ್ಧವಾದ ಜೇನುತುಪ್ಪವಾಗಿದ್ದು ಯಾವುದೇ ಪ್ರಕ್ರೀಯೆಗಳಿಂದ ಸಂಸ್ಕರಿಸಿರುವುದಿಲ್ಲ. ಹಾಗಾಗಿ, ಇದರಲ್ಲಿ ಹೆಚ್ಚಿನ ಮಟ್ಟದ ಪ್ರಯಾಗ ಧಾನ್ಯಗಳು, ಫೈಟೋನ್ಯೂಟ್ರಿಯೆಂಟ್ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಆದರೆ, ಆರ್ಗಾನಿಕ್ ಅಥವಾ ಸಾವಯವ ಜೇನುತುಪ್ಪ ಸಾವಯವವಾಗಿ ಬೆಳೆಸಲ್ಪಟ್ಟ ಸಸ್ಯಗಳು ಮತ್ತು ಹೂವುಗಳಿಂದ ಉತ್ಪತ್ತಿಯಾಗಿರುತ್ತದೆ. ಸಾವಯವ ಜೇನು ಸಂಸ್ಕರಣೆಯನ್ನು ಪಡೆಯುತ್ತದೆ. ಹೀಗಾಗಿ ಸಹಜವಾಗಿಯೇ ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತದೆ.

ಪರಿವಿಡಿ:

೧. ಜೇನುತುಪ್ಪ ಸುತ್ತಲಿನ ಕಟ್ಟುಕಥೆಗಳನ್ನು ಭೇದಿಸೋಣವೇ?
೨. ನಿಮ್ಮ ಮಖದ ಸೌಂದರ್ಯಕ್ಕೆ ಜೇನುತುಪ್ಪ: ಬಿಸಿಲಿನಿಂದಾದ ಕಂದುಬಣ್ಣವನ್ನು ಕಿತ್ತೊಗೆಯುವ ಫೇಸ್ ಪ್ಯಾಕ್
೩. ತ್ವಚೆಯ ಸೌಂದರ್ಯಕ್ಕೆ ಜೇನುತುಪ್ಪ: ಆರ್ದ್ರಕ ಅಂಗಲೇಪ
೪. ತ್ವಚೆಯ ಸೌಂದರ್ಯಕ್ಕೆ ಜೇನುತುಪ್ಪ: ಹೊಳಪಿಗಾಗಿ ಜೇನುತುಪ್ಪದ ಫೇಸ್ ಪ್ಯಾಕ್
೫. ತ್ವಚೆಯ ಸೌಂದರ್ಯಕ್ಕೆ ಜೇನುತುಪ್ಪ: ಮೊಡವೆ ವಿರೋಧಿ ಜೇನುತುಪ್ಪ
೬. ಕೇಶ ಸೌಂದರ್ಯಕ್ಕೆ ಜೇನುತುಪ್ಪ: ಹಾನಿಗೊಳಗಾಗಿರುವ ಕೂದಲಿಗೆ ಪರಿಹಾರ
೭. ಕೇಶ ಸೌಂದರ್ಯಕ್ಕೆ ಜೇನುತುಪ್ಪ: ಸೀಳಿಕೊಂಡಿರುವ ಕೂದಳೆಲೆಗೆ ಪರಿಹಾರ
೮. ಜೇನುತುಪ್ಪದ ತುಟಿಗಳ ಮುಸುಕು
೯. ಜೇನುತುಪ್ಪದ ಎಕ್ಸ್ಫೋಲಿಯೇಷನ್ ಪ್ಯಾಕ್
೧೦. ಒರಟಾದ ಉಗುರುಗಳು ಮತ್ತು ಶುಷ್ಕ ತೊಗಟೆಗಳಿಗೆ ಪರಿಹಾರ
೧೧. ಜೇನುತುಪ್ಪದಿಂದ ಸ್ನಾನ

೧. ಜೇನುತುಪ್ಪ ಸುತ್ತಲಿನ ಕಟ್ಟುಕಥೆಗಳನ್ನು ಭೇದಿಸೋಣವೇ?

ಜೇನುತುಪ್ಪ ಕೆಡಬಹುದೇ?

ಇಲ್ಲ, ಜೇನುತುಪ್ಪ ಶಾಶ್ವತವಾಗಿ ಇರುವಂತದ್ದು. ಸಂಸ್ಕರಿಸದ ಕಚ್ಚಾ ಜೇನುತುಪ್ಪ ಕೂಡಾ ಕೆಡಲಾರದು. ಸಮಯ ಕಳೆದಂತೆ, ಜೇನುತುಪ್ಪ ಸ್ಫಟಿಕೀಕರಣದ ಪ್ರಕ್ರೀಯೆಗೊಳಗಾಗಿ, ಗಟ್ಟಿಯಾಗ ತೊಡಗುತ್ತದೆ. ,ಮಾರುಕಟ್ಟೆಯಲ್ಲಿ ದೊರಕುವ ಜೇನುತುಪ್ಪದೊಳಗಿನ ತೇವಾಂಶವನ್ನು ತೆಗೆದಿರಲಾಗುತ್ತದೆ. ಹಾಗಾಗಿ ಅದು ಸ್ಫಟಿಕೀಕರಣಕ್ಕೊಳಗಾಗುವುದಿಲ್ಲ.

ಜೇನುತುಪ್ಪದ ಪ್ರಯೋಜನಗಳನ್ನು ನೀವು ನಿಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂದು ತಿಳಿದುಕೊಳ್ಳಬೇಕೇ?! ಹಾಗಿದ್ದರೆ ಇವುಗಳನ್ನು ಓದಿ!

೨. ನಿಮ್ಮ ಮಖದ ಸೌಂದರ್ಯಕ್ಕೆ ಜೇನುತುಪ್ಪ: ಬಿಸಿಲಿನಿಂದಾದ ಕಂದುಬಣ್ಣವನ್ನು ಕಿತ್ತೊಗೆಯುವ ಫೇಸ್ ಪ್ಯಾಕ್

ಜೇನುತುಪ್ಪವನ್ನು ಚರ್ಮಕ್ಕೆ ಬಳಸಿದರೆ, ಅದರಿಂದಾಗುವ ಪ್ರಯೋಜನಗಳು ಹಲವಾರು. ಶುದ್ಧ ಜೇನುತುಪ್ಪವನ್ನು ಬಿಸಿಲಿನಿಂದಾದ ಕಂಡುಬಣ್ಣವನ್ನು ತೆಗೆಯುವ ಸಾಮಗ್ರಿಗಳೊಂದಿಗೆ ಸೇರಿಸಿದಾಗ, ನಿಮ್ಮ ಚರ್ಮವು ಆರ್ಧ್ರಕವಾಗಿ, ಹೊಳಪಿನಿಂದ, ಸೌಂದರ್ಯಭರಿತವಾಗಿ ಕಾಣುತ್ತದೆ. ಜೇನುತುಪ್ಪ ಹುಮೆಕ್ಟ್ಯಾಂತ್ ಆಗಿರುವುದರಿಂದ ಚರ್ಮಕ್ಕೆ ತೇವಾಂಶವನ್ನು ಸೇರಿಸುತ್ತದೆ. ಅದನ್ನು ಬಲಿಸುವ ಪರಿ ಇಲ್ಲಿದೆ: ಒಂದು ಚಮಚದಷ್ಟು ಜೇನುತುಪ್ಪವನ್ನು ಅರ್ಧ ಬಟ್ಟಲು ಮೊಸರು, ಒಂದು ಚಿಟಿಕೆ ಅರಿಶಿನ, ಕೆಲವು ಹನಿಗಳು ನಿಂಬೆ ರಸ ಮತ್ತು ೨ ಚಮಚ ಕಡಲೆ ಹಿಟ್ಟಿನೊಂದಿಗೆ ಸೇರಿಸಿ, ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿ. ೧೫ ನಿಮಿಷದ ನಂತರ ತೊಳೆದುಕೊಂಡರೆ, ಬಿಸಿಲಿನಿಂದಾಗಿದ್ದ ಕಂದುಬಣ್ಣ ಕಡಿಮೆಯಾಗಿರುತ್ತದೆ.

[Back To Top]

೩. ತ್ವಚೆಯ ಸೌಂದರ್ಯಕ್ಕೆ ಜೇನುತುಪ್ಪ: ಆರ್ದ್ರಕ ಅಂಗಲೇಪ

ನಿಮ್ಮದ ಒಣ ಚರ್ಮವಾಗಿದ್ದರೆ, ೩ ಚಮಚ ಗ್ಲೀಸರಿನ್ ಮತ್ತು ೧ಚಮಚ ಶುದ್ಧ ಜೇನುತುಪ್ಪ, ಜೊತೆಗೆ ಒಂದು ವಿಟಮಿನ್ ಕ್ಯಾಪ್ಸುಲ್ ಹಾಕಿಕೊಂಡು ನಿಮ್ಮ ಒಣ ಮತ್ತು ಒರಟು ತ್ವಚೆಗೆ ರಾತ್ರಿ ಮಲಗುವ ಸಮಯದಲ್ಲಿ ಲೇಪಿಸಿಕೊಳ್ಳಿ. ಹೇಗೆ ಪ್ರತಿ ರಾತ್ರಿ ಮಾಡಿದರೆ, ಒಂದು ತಿಂಗಳೊಳಗೆ ನಿಮ್ಮ ಚರ್ಮದಲ್ಲಾಗುವ ಬದಲಾವಣೆಗಳನ್ನು ಕಾಣಬಹುದು. ಜೇನುತುಪ್ಪದಲ್ಲಿರುವ ಆರ್ಧ್ರಕ ಗುಣದಿಂದ, ಹಲವಾರುಸೌಂದರ್ಯ ಉತ್ಪನ್ನಗಳಲ್ಲಿ ಜುನೇತುಪ್ಪವನ್ನು ಬಳಸಲಾಗುವುದು.

 

೪. ತ್ವಚೆಯ ಸೌಂದರ್ಯಕ್ಕೆ ಜೇನುತುಪ್ಪ: ಹೊಳಪಿಗಾಗಿ ಜೇನುತುಪ್ಪದ ಫೇಸ್ ಪ್ಯಾಕ್

ಕಚ್ಚಾ ಜೇನುತುಪ್ಪ ಪ್ರಬಲವಾದ ಆರ್ಧ್ರಕ ಶಕ್ತಿಯನ್ನು ಹೊಂದಿದೆ. ಅದನ್ನು ನಿಂಬೆ ಹಣ್ಣಿನ ಸಿಪ್ಪೆಯ ಜೊತೆ ಸೇರಿಸಿ ಹಚ್ಚಿಕೊಂಡರೆ ನಿಮ್ಮ ತ್ವಚೆಯನ್ನು ತೆಳುವಾಗಿ, ಹೊಳೆಯುವಂತೆ ಮಾಡುತ್ತದೆ. ಅರ್ಧ ನಿಂಬೆ ಹಣ್ಣನ್ನು ಒಂದು ಚಮಚದಷ್ಟು ಜೇನುತುಪ್ಪದಲ್ಲಿ ಅದ್ದಿ, ನಿಮ್ಮ ತ್ವಚೆಗೆ ಮಸಾಜ್ ೧೫ ನಿಮಿಷಗಳವರೆಗೆ ಮಸಾಜ್ ಮಾಡಿಕೊಂಡು, ತೊಳೆದುಕೊಳ್ಳಿ. ಇದು ನಿಮ್ಮ ಮುಖದ ಮೇಲಿರುವ ಎಲ್ಲಾ ಕಲೆಗಳನ್ನು ತೆಗೆದು, ಚರ್ಮದ ಬಣ್ಣವನ್ನು ತೆಳುವಾಗಿಸುತ್ತದೆ.

[Back To Top]

೫. ತ್ವಚೆಯ ಸೌಂದರ್ಯಕ್ಕೆ ಜೇನುತುಪ್ಪ: ಮೊಡವೆ ವಿರೋಧಿ ಜೇನುತುಪ್ಪ

ಕಚ್ಚಾ ಜೇನುತುಪ್ಪದಲ್ಲಿ ಆಂಟಿಬ್ಯಾಕ್ಟೀರಿಯಾ ಹಾಗೂ ಆಂಟಿಫಂಗಲ್ ಗುಣಗಳಿದ್ದು, ಚರ್ಮದ ರಂಧ್ರದಲ್ಲಿರುವ ಯಾವುದೇ ಹಾನಿಕಾರಕ ಬಸಿಟೇರಿಯಾಗಳನ್ನು ಕೊಂದುಹಾಕುತ್ತದೆ. ಈ ರೀತಿಯ ಬ್ಯಾಕ್ಟೀರಿಯಾಗಳು ಮೊಡವೆ ಹರಡುವುದಕ್ಕೆ ಕಾರಣವಾಗುತ್ತವೆ. ಅದನ್ನು ತಡೆಗಟ್ಟಲು ನೀವು ಮಾಡಬೇಕಾದದ್ದು ಇಷ್ಟೇ! ಬೇವಿನ ಎಲೆ ಮತ್ತು ತುಳಸಿ ಎಲೆಗಳನ್ನು ಸ್ವಲ್ಪ ನೀರಿನಲ್ಲಿ ಕುದಿಸಿ, ಅದನ್ನು ಅರೆದು ಪೇಸ್ಟ್ ಮಾಡಿಕೊಳ್ಳಿ. ನಂತರ ಒಂದು ಚಮಚ್ ಜೇನುತುಪ್ಪದೊಂದಿಗೆ ಕೆಲವು ಹನಿಗಳು ಟೀ ಟ್ರೀ ಎಣ್ಣೆ ಸೇರಿಸಿ, ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿ. ಇದನ್ನು ಎರಡು ದಿನಕ್ಕೊಮೆ ಲೇಪಿಸುವುದರಿಂದ, ಮೊಡವೆಗಳು ದೂರವಾಗುತ್ತವೆ. ಜೇನುತುಪ್ಪವನ್ನು ನೇರವಾಗಿ ಮೊಡವೆಗೆ ಹಚ್ಚಿಕೊಳ್ಳಬಹುದು.

 

೬. ಕೇಶ ಸೌಂದರ್ಯಕ್ಕೆ ಜೇನುತುಪ್ಪ: ಹಾನಿಗೊಳಗಾಗಿರುವ ಕೂದಲಿಗೆ ಪರಿಹಾರ

ಕಚ್ಚಾ ಜೇನುತುಪ್ಪ ನೈಸರ್ಗಿಕವಾದ ಕಂಡೀಷನರ್ ಗುಣಗಳನ್ನು ಹೊಂದಿದೆ. ಅದು ಕೂದಲಿಗೆ ಹಚ್ಚಿದಾಗ ಹೊಳಪು ಮತ್ತು ತೇವಾಂಶವನ್ನು ನೀಡುತ್ತದೆ. ನಿಮ್ಮ ಕೂದಲು ಒರಟಾಗಿ, ರಾಸಾಯನಿಕವಾಗಿ ಹಾನಿಗೊಳಗಾಗಿದ್ದರೆ, ಜೇನುತುಪ್ಪ ನಿಮ್ಮ ಕೂದಲನ್ನು ಮೊದಲಿನ ಸ್ಥಿತಿಗೆ ತರುವುದಕ್ಕೆ ಸಹಾಯ ಮಾಡುತ್ತದೆ.

೭. ಕೇಶ ಸೌಂದರ್ಯಕ್ಕೆ ಜೇನುತುಪ್ಪ: ಸೀಳಿಕೊಂಡಿರುವ ಕೂದಳೆಲೆಗೆ ಪರಿಹಾರ

ಶುದ್ಧ ಜೇನುತುಪ್ಪ ಕೂದಲಿನ ತೇವಾಂಶವನ್ನು ಹಿಡಿದಿಡುತ್ತದೆ ಹಾಗೂ ಕೂದಲೆಳೆಗಳಲ್ಲಿ ಉಂಟಾಗಬಹುದಾದ ಸೀಳುಗಳನ್ನು ತಡೆಯುತ್ತದೆ. ಪರಿಸರ ಮಾಲಿನ್ಯ ಹಾಗೂ ಸೂರ್ಯನ ಅಪಾಯಕಾರಿ ಕಿರಣಗಳಿಂದ ಕೂದಲೆಳೆಗಳಲ್ಲಿ ಸೀಲುಂಟಾಗುವ ಸಾಧ್ಯತೆ ಇರುತ್ತದೆ. ಅದನ್ನು ತಡೆಗಟ್ಟಲ್ಲು, ಒಂದು ಬಾಳೆಹಣ್ಣು, ೨-೩ ಚಮಚದಷ್ಟು ಜೇನುತುಪ್ಪ ಮತ್ತು ಕೆಲವು ಹನಿಗಳು ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ ಸೇರಿಸಿ, ಅರೆದು, ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ. ಸೂಕ್ತ ಪರಿಣಾಮ ಕಾಣಲು ೧೫ ನಿಮಿಷಗಳ ತೊಳೆದುಕೊಳ್ಳಿ.

[Back To Top]

೮. ಜೇನುತುಪ್ಪದ ತುಟಿಗಳ ಮುಸುಕು

ನೀವು ನಿಮ್ಮ ತುಟಿ ಮೃದುವಾಗಿ, ಸುಂದರವಾಗಿ ಇರಬೇಕು ಎಂದು ಬಯಸಿದರೆ, ಸಾವಯುವ ಜೇನುತುಪ್ಪ ಖಂಡಿತಾಯಾಗಿಯೂ ನಿಮಗೆ ಸಹಾಯ ಮಾಡುತ್ತದೆ. ಪ್ರತಿರಾತ್ರಿ ಸಾವಯವ ಜೇನುತುಪ್ಪವನ್ನು ನಿಮ್ಮ ತುಟಿಗೆ ಹಚ್ಚಿಕೊಳ್ಳುವುದರಿಂದ ಒರಟು ತುಟಿ ಮಾಯವಾಗಿ, ನಿಮ್ಮ ತುಟಿ ಸುಂದರವಾಗಿಯೂ, ಮೃದುವಾಗಿಯೂ ಕಾಣುತ್ತದೆ.

೯. ಜೇನುತುಪ್ಪದ ಎಕ್ಸ್ಫೋಲಿಯೇಷನ್ ಪ್ಯಾಕ್

ಜೇನುತುಪ್ಪ ಮತ್ತು ಸಕ್ಕರೆ ಸಕ್ರಿಯ ಅಧ್ರಕಾರಿಯಾಗಿ ನಿಮ್ಮ ತ್ವಚೆಯ ರಂಧ್ರಗಳನ್ನು ಸ್ವಚ್ಛಗೊಳಿಸುವುದರೊಂದಿಗೆ, ಸತ್ತ ಜೀವಕೋಶಗಳನ್ನು ಕಿತ್ತೊಗೆದು, ನಿಮ್ಮ ಚರ್ಮಕ್ಕೆ ಜೀವ ತುಂಬುತ್ತದೆ. ಈ ಪ್ಯಾಕ್ ಅನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿಗಳು ಇಂತಿವೆ. ಒಂದು ಬಟ್ಟಲು ಸಕ್ಕರೆಯಲ್ಲಿ, ೪ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ. ಅದನ್ನು ನಿಮ್ಮ ತ್ವಚೆಗೆ ಲೇಪಿಸಿಕೊಂಡು ಮಸಾಜ್ ಮಾಡಿಕೊಂಡರೆ, ಚರ್ಮದಲ್ಲಿರುವ ಎಲ್ಲಾ ಕಲುಷಿತ ಅಂಶಗಳು ಹೋಗಿ, ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

೧೦. ಒರಟಾದ ಉಗುರುಗಳು ಮತ್ತು ಶುಷ್ಕ ತೊಗಟೆಗಳಿಗೆ ಪರಿಹಾರ

ಜೇನುತುಪ್ಪದ ಉಪಯೋಗದಿಂದ ಸರಾಗವಾಗಿ, ಒರಟಾದ ಉಗುರುಗಳು ಮತ್ತು ಶುಷ್ಕ ತೊಗಟೆಗಳನ್ನು ಚಿಕಿತ್ಸಿಸಬಹುದು. ಶುದ್ಧ ಜೇನುತುಪ್ಪವನ್ನು ನಿಮ್ಮ ಉಗುರುಗಳು ಮತ್ತು ತೊಗಟೆಗಳಿಗೆ ಪ್ರತಿದಿನ ಸ್ನಾನಕ್ಕೆ ಹೋಗುವ ಮೊದಲು ಹಚ್ಚಿಕೊಂಡರೆ, ಜೇನುತುಪ್ಪದಲ್ಲಿರುವ ಮೊಷಕಾಂಶಕಗಳು ನಿಮ್ಮ ತೊಗಟೆಯನ್ನು ಅರ್ಧರಿಕರಿಸಿ, ನಿಮ್ಮ ಉಗುರುಗಳನ್ನು ಬಲಗೊಳಿಸುತ್ತದೆ. ಹೆಚ್ಚಿನ ಪ್ರಭಾವಕ್ಕಾಗಿ, ಬದಾಮ್ ಎಣ್ಣೆಯನ್ನು ಬಳಸಬಹುದು.

[Back To Top]

೧೧. ಜೇನುತುಪ್ಪದಿಂದ ಸ್ನಾನ

ನಿಮಗೆ ರಾಣಿಯಂತೆ ಭಾಸವಾಗಬೇಕೇ? ಜೇನುತುಪ್ಪ, ಹಾಲು ಮತ್ತು ಗುಲಾಬಿಯೊಂದಿಗೆ ಸ್ನಾನ ಮಾಡಿ! ಸಾವಯವ ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಅದು ಲೀನವಾಗುವವರೆಗೂ ನೆನಸಿಡಿ. ಈ ಮಿಶ್ರಣವನ್ನು ನೀವು ಸ್ನಾನ ಮಾಯಾದಳು ಬಳಸುವ ನೀರಿನಲ್ಲಿ ಸೇರಿಸಿ, ಗುಲಾಬಿ ಎಲೆಗಳೊಂದಿಗೆ, ಹಾಲನ್ನೂ ಸೇರಿಸಿ, ಸ್ನಾನ ಮಾಡಿ. ಇದರಿಂದ ನಿಮ್ಮ ದೇಹಕ್ಕೆ ಶಿಥಿಲಗೊಳ್ಳುವುದಷ್ಟೇ ಅಲ್ಲದೇ, ನಿಮ್ಮ ಮನಸ್ಸಿಗೂ ವಿಶ್ರಾಂತಿ ದೊರೆಯುವುದು. ಜೇನುತುಪ್ಪ ನಿಮ್ಮ ಚರ್ಮದ ಮುಚ್ಚಿಕೊಂಡಿರುವ ರಂಧ್ರವನ್ನು ತೆರೆಯುವುದಷ್ಟೇ ಅಲ್ಲದೇ, ಚರ್ಮದಲ್ಲಿರುವ ಕಲ್ಮಶವನ್ನು ತೊರೆದು ಹಾಕುತ್ತದೆ.

ಜೇನುತುಪ್ಪದ ಉಪಯೋಗಗಳ ಕುರಿತು ನಿಮಗೆ ಯಾವುದಾದರೂ ಪ್ರಶ್ನೆ ಇದೆಯೇ? ಅಥವಾ ನಿಮಗೆ ಜೇನುತುಪ್ಪದ ಬೇರೆ ಪ್ರಯೋಜನಗಳ ಬಗ್ಗೆ ಅರಿವಿದೆಯೇ? ನಮಗೂ ತಿಳಿಸಿ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon