Link copied!
Sign in / Sign up
26
Shares

ಹಾಳೆಯಿಂದ 1 ನಿಮಿಷದಲ್ಲಿ ಚಿಟ್ಟೆ ತಯಾರಿಸಿ ನಿಮ್ಮ ಮಗುವಿನ ಕೌಶಲ್ಯ ಹೆಚ್ಚಿಸಿ

ನಿಮ್ಮ ಮಗುವನ್ನು ಶಾಲೆಗೆ ಕಳುಹಿಸಿದ ಮೇಲೆ ಶಾಲೆಯಲ್ಲಿ ಪ್ರಾಜೆಕ್ಟ್ ಕೊಡುವುದು ಅಥವಾ ನಿಮ್ಮಲ್ಲಿರುವ ಕೌಶಲ್ಯವನ್ನು ತೋರಿಸುವಲ್ಲಿ ಒಂದು ಅವಕಾಶ ಸಿಕ್ಕರೆ ಖಂಡಿತ ಇಂತಹ ಸುಲಭ ಉಪಾಯಗಳನ್ನು ಬಳಸಿಕೊಂಡು ನಿಮ್ಮ ಮಗುವನ್ನು ಶಾಲೆಯ ಕೇಂದ್ರಬಿಂದುವನ್ನಾಗಿ ಮಾಡಿ.

ಬಣ್ಣದ ಹಾಳೆಗಳಿಂದ ಬಣ್ಣ ಬಣ್ಣದ ಚಿಟ್ಟೆಗಳನ್ನು ಮಾಡಿ, ಅದು ಕೇವಲ ೧ ನಿಮಿಷದಲ್ಲಿ. ನೀವು ಮಾಡಬೇಕಾದರೆ ಗೊಂದಲವಾಗಬಾರದು ಎಂದು ಈ ವಿಡಿಯೋ ಅನ್ನು ನಿಮಗಾಗಿ ಹಾಕಿರುವೆವು.

ಒಂದು ಹಾಳೆಯನ್ನು ಚೌಕಕಾರದಲ್ಲಿ ಸಮನಾಗಿ ಕತ್ತರಿಸಿ, ಕರ್ಣಿಯವಾಗಿ ಮಡಚಿ, ಮತ್ತೆ ತೆಗೆಯಿರಿ ಪುನಃ ಮತ್ತೊಂದು ವಿರುದ್ಧ ಕರ್ಣಿಯ ದಿಕ್ಕಿನಲ್ಲಿ ಮಡಚಿ. ನಂತರ ತೆಗೆದು ಲಂಬವಾಗಿ ಸಮನಾಗಿ ಮಡಚಿ, ಒಂದು ತುದಿಯನ್ನು ಒಳಗಡೆ ಗುರುತು ಇರುವ ಜಾಗಕ್ಕೆ ಮದ್ಯಕ್ಕೆ ಸಮನಾಗಿ ಒಳಗೆ ಸೇರಿಸಿ. ಇನ್ನೊಂದು ತುದಿಯಲ್ಲೂ ಹೀಗೆ ಮಾಡಿ, ಈಗ ಹಾಳೆ ತ್ರಿಭುಜದ ಆಕಾರದಲ್ಲಿ ಕಾಣಿಸುವುದು. ಕೆಳಗಡೆಯ ಒಂದು ತುದಿಯನ್ನು ಅರ್ಧ ವೃತ್ತಾಕಾರದಲ್ಲಿ ಕತ್ತರಿಸಿ, ಜೊತೆಗಿರುವ ಹಾಳೆಯ ಒಂದು ಭಾಗವನ್ನು ಅರ್ಧಕ್ಕೆ ಮಡಚಿ(ವಿಡಿಯೋದಲ್ಲಿ ತೋರಿಸಿರುವಂತೆ), ಎರಡು ತುದಿಯನ್ನು ಸೇರಿಸಿ ಈಗ ನಿಮ್ಮ ಬಣ್ಣದ ಒಂದು ಚಿಟ್ಟೆ ತಯಾರಾಗಿದೆ.

ಇದನ್ನು ನಿಮ್ಮ ಮನೆಯನ್ನು ಅಲಂಕರಿಸಲು ಉಪಯೋಗಿಸಬಹುದು. ಅಥವಾ ಸಮಾರಂಭಗಳಲ್ಲಿ ಅಲಂಕಾರ ಮಾಡಲು ಬಳಸಬಹುದು. ಇದು ನಿಮಗೆ ಇಷ್ಟವಾದಲ್ಲಿ ಹಂಚಿಕೊಳ್ಳಿ ಮತ್ತಷ್ಟು ಪೇಪರ್ ಕ್ರಾಫ್ಟ್ ಅನ್ನು ನಿಮಗೆ ತಿಳಿಸುವೆವು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon