Link copied!
Sign in / Sign up
0
Shares

ಈ 5 ವಿಷಯಗಳನ್ನ ಹೊಸ ಅಮ್ಮಂದಿರಿಗೆ ವೈದ್ಯರು ಹೇಳುವುದಿಲ್ಲ

ಹೊಸ ಅಮ್ಮಂದಿರಿಗೆ ವೈದ್ಯರು ಬಹಳಷ್ಟು ವಿಷಯಗಳನ್ನ ಹೇಳುವುದಿಲ್ಲ . ಕೆಲವೊಂದು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಪಟ್ಟಿಯಿಂದ ಗೊತ್ತಿದ್ದೋ ಅಥವಾ ಗೊತ್ತಿರದೆಯೊ ಕೈಬಿಡಲಾಗಿರುತ್ತದೆ. ಆದರೆ ಕೆಲವೊಂದು ವಿಷಯಗಳು ತುಂಬಾ ಸಾಮಾನ್ಯವಾಗಿದ್ದು, ಅವುಗಳನ್ನ ಬಾಯ್ಬಿಟ್ಟು ಹೇಳುವುದೇನು ಬೇಡ ಎಂದು ಕೂಡ ಅವರು ಹೇಳದೆ ಇರಬಹುದು. ಇದರ ಬಗ್ಗೆ ಸಹಸ್ರಾರು ಪುಸ್ತಕಗಳು, ಮ್ಯಾಗಜಿನ್ಗಳು ಬಂದಿವೆ. ಇವುಗಳೊಂದಿಗೆ ಇಂಟರ್ನೆಟ್ ಅಲ್ಲೇ ಸಾವಿರ ಸಾವಿರ ಲೇಖನಗಳು ಕೂಡ ಲಭ್ಯವಿವೆ.

ನೀವು ಗೂಗಲ್ ಮಾಡಿದರೆ ಹೊಸದಾಗಿ ತಾಯಿ ಆಗಿರುವವರು ಮತ್ತು ಒಂದಕ್ಕಿಂತ ಹೆಚ್ಚು ಬಾರಿ ಗರ್ಭತಾಳಿರುವವರು ಬರೆದಿರುವ ಲೇಖನಗಳನ್ನ ನೀವು ಓದಬಹುದು. ಆದರೆ ಇಲ್ಲಿ ನೀವು ಗಮನಿಸಬಹುದಾದ ಒಂದು ವಿಷಯ ಎಂದರೆ, ನೀವು ಇದರ ಬಗ್ಗೆ ಎಷ್ಟೇ ಓದಿದರೂ, ಹೊಸ ಜೀವ ಒಂದು ಸೃಷ್ಟಿಯಾಗುವುದರ ಬಗ್ಗೆ  ಇನ್ನೂ ತಿಳಿಯದು ಬಹಳವಿದೆ ಎಂಬುದು. ಕೆಲವೊಂದು ಬಾರಿ ವೈದ್ಯರೇ ಎಷ್ಟೊಂದು ವಿರಳವಾದ ಆದರೆ ಸಹಜವಾದ ವಿದ್ಯಮಾನಗಳನ್ನ ಗುರುತಿಸಲು ಕಷ್ಟಪಡುತ್ತಾರೆ.

ಹೊಸ ಅಮ್ಮಂದಿರಿಗೆ ವೈದ್ಯರು ಹೇಳದ 5 ವಿಷಯಗಳು ಇಲ್ಲಿವಿ ನೋಡಿ :

 

೧. ಒಳ್ಳೆಯ ಆಹಾರ ಸೇವಿಸಿ

ಇದೇನು ದೊಡ್ಡ ವಿಷಯ, ಇದನ್ನು ವೈದ್ಯರು ಹೇಳದಿದ್ದರೂ ನಮಗೆ ತಿಳಿದಿರುತ್ತದೆ ಎಂಬುದು ನಿಮ್ಮ ವಾದ ಆಗಿರಬಹುದು. ಆದರೆ ಬಹುತೇಕ ಬಾರಿ ಅಮ್ಮಂದಿರು ತಮ್ಮ ಪ್ರೆಗ್ನನ್ಸಿ ಸಮಯದಲ್ಲಿ ಬಯಕೆ ಉಂಟಾದಾಗ ಏನು ಬೇಕಾದರೂ ಸೇವಿಸಬಹುದು ಎಂಬ ಗ್ರಹಿಕೆಯಲ್ಲಿ, ಅತಿಯಾಗಿ ಕುರುಕಲು ತಿಂಡಿಗಳನ್ನ ಸೇವಿಸಿಬಿಡಬಹುದು. ಆದರೆ ಅದು ತಪ್ಪು. ಇನ್ನಿತರೇ ಸಮಯದಲ್ಲಿ ಆರೋಗ್ಯಕರ ಆಹಾರ ಸೇವಿಸುವುದು ಎಷ್ಟು ಮುಖ್ಯವೋ, ಪ್ರೆಗ್ನನ್ಸಿ ಸಮಯದಲ್ಲಿ ಮತ್ತು ಪ್ರೆಗ್ನನ್ಸಿಯ ನಂತರ ಆರೋಗ್ಯಕರವಾದ ಉತ್ತಮ ಆಹಾರ ಸೇವಿಸುವುದು ಅಷ್ಟೇ ಮುಖ್ಯ. ನೀವು ಏನೆಲ್ಲಾ ಸೇವಿಸುತ್ತಿರೋ, ಅದುವೇ ಎದೆಹಾಲಿನ ರೂಪದಲ್ಲಿ ನಿಮ್ಮ ಮಗುವಿನ ದೇಹ ಸೇರುವುದು ಎಂಬ ವಿಷಯವನ್ನ ಮರೆಯಬೇಡಿ. ಹೀಗಾಗಿ ಯಾವಾಗಲಾದರೂ ಒಮ್ಮೆ ಕುರುಕಲು ತಿಂಡಿ ಸೇವಿಸಿ, ಆದರೆ ಅದನ್ನೇ ಒಂದು ಅಭ್ಯಾಸ ಮಾಡಿಕೊಳ್ಳಬೇಡಿ.

 

೨. ಸಹಾಯವನ್ನ ಪಡೆಯಿರಿ

ವೈದ್ಯರು ಇದನ್ನು ನಿಮಗೆ ಎಂದೆಂದಿಗೂ ಹೇಳುವುದಿಲ್ಲ. ಯಾರು ನಿಮಗೆ ಇದನ್ನು ಹೇಳುವುದಿಲ್ಲ. ಗರ್ಭಧಾರಣೆ ಎನ್ನುವುದೇ ಒಂದು ದೊಡ್ಡ ಕೆಲಸವಾಗಿದ್ದು, ಇದು ಆಯಾಸದಾಯಕ ಕೂಡ ಆಗಿರುತ್ತದೆ. ನಿಮಗೆ ಅಗತ್ಯ ಬಿದ್ದಾಗಲೆಲ್ಲಾ ಸಹಾಯ ಪಡೆದುಕೊಳ್ಳಿ ಆದರೆ ಪ್ರೆಗ್ನನ್ಸಿಯನ್ನೇ ನೆಪವಾಗಿಸಿಕೊಂಡು ಸಣ್ಣ ಪುಟ್ಟ ಕೆಲಸಗಳಿಂದಲೂ ತಪ್ಪಿಸಿಕೊಂಡು, ಯಾವುದೇ ಚಟುವಟಿಕೆಗಳಿಲ್ಲದೆ, ನಿಷ್ಕ್ರಿಯವಾಗಿ ಕೂರಬೇಡಿ. ಮನೆಯಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನ ಮಾಡಬಹುದು ಮತ್ತು ನಿಮಗೆ ಒಂಬತ್ತು ತಿಂಗಳು ಆಗುವವರೆಗೂ ಕಚೇರಿಗೆ ಹೋಗಿ ಕೆಲಸ ಕೂಡ ಮಾಡಬಹುದು. ಆದರೆ ಯಾವುದನ್ನೂ ಅತಿಯಾಗಿ ಮಾಡಬೇಡಿ ಅಷ್ಟೇ.

 

೩. ಮಾನಸಿಕ ಅರೋಗ್ಯ ತುಂಬಾನೇ ಮುಖ್ಯ

ಗರ್ಭಧಾರಣೆ ಮತ್ತು ಹೆರಿಗೆಯು ನೀವು ಹಿಂದೆಂದೂ ಅನುಭವಿಸಿರದ ರೀತಿಯಲ್ಲಿ ನಿಮ್ಮ ಭಾವನೆಗಳು ಏರುಪೇರಾಗುವಂತೆ ಮಾಡುತ್ತವೆ. ಕೇವಲ ನೀವು ಪ್ರೆಗ್ನನ್ಸಿ ಸಮಯ ಮುಗಿಸಿ, ಈಗ ಮಗುವಿನ ಪೋಷಣೆಗೆ ಕಾಲಿಡುತ್ತಿದ್ದೀರಾ ಎಂದ ಮಾತ್ರಕ್ಕೆ ಎಲ್ಲವೂ ಸರಿ ಹೋಗಿ ಬಿಡುತ್ತದೆ ಎಂದರ್ಥವಲ್ಲ. ವಾಸ್ತವದಲ್ಲಿ, ಮಗು ಆದಮೇಲೆಯೇ ಇನ್ನಷ್ಟು ಕಷ್ಟಗಳು ಉದಯಿಸುವುದು. ಮಗುವಿನೊಂದಿಗಿನ ಮೊದಲ ವರ್ಷ ತುಂಬಾನೇ ಕಷ್ಟಕರವಾಗಿದ್ದು, ಈ ಸಮಯದಲ್ಲಿ ನೀವು ನಿಮ್ಮ ದೈಹಿಕ ಆರೋಗ್ಯ ಮತ್ತು ನಿದ್ರಾ ವಿಧಾನವನ್ನ ಸಂಭಾಳಿಸುವುದರೊಂದಿಗೆ ನಿಮ್ಮ ಮಾನಸಿಕ ಆರೋಗ್ಯವನ್ನ ಕೂಡ ಕಾಪಾಡಿಕೊಳ್ಳಬೇಕು.

 

೪. ನಿಮ್ಮ ದೇಹಕ್ಕೆ ಇದನ್ನು ಮಾಡುವ ಸಾಮರ್ಥ್ಯ ಇದೆ

ಒಂದು ಹಂತದಲ್ಲಿ, ಮುಖ್ಯವಾಗಿ ಹೆರಿಗೆ ನೋವು ಶುರುವಾದಾಗ, ನಿಮ್ಮ ದೇಹವು ಇನ್ನೂ ಈ ನೋವನ್ನು ತಡೆಯಲಾಗುತ್ತದ ಎಂಬ ಯೋಚನೆ ನಿಮ್ಮಲ್ಲಿ ಮೂಡಬಹುದು. ಹೀಗೆ ನೋವಿನಿಂದ ಆಸ್ಪತ್ರೆಯ ಒಳಗೆ ಹೋಗಿ, ವಾಪಸ್ ಬರುತ್ತಾ ಕೈಯಲ್ಲಿ ಖುಷಿಯ ಬುತ್ತಿಯನ್ನು ಇಟ್ಟುಕೊಂಡು ಬಂದಿರುವ ಎಷ್ಟೋ ತಾಯಂದಿರ ಬಗ್ಗೆ ನೀವು ನೆನಿಸಿಕೊಳ್ಳಬೇಕು. ಮಾನವನ ದೇಹವು ಇದಕ್ಕೆಂದೇ ತಯಾರಾಗಿದೆ ಮತ್ತು ಇದನ್ನು ಆ ದೇಹವು ನಿಭಾಯಿಸಬಹುದು ಎಂಬುದನ್ನು ನೆನಪಲ್ಲಿಡಿ. ಹೆರಿಗೆಯ ಪ್ರಕ್ರಿಯೆ ಮತ್ತು ನವಜಾತ ಶಿಶುವಿನ ಪೋಷಣೆಯನ್ನು ಯಶಸ್ವಿಯಾಗಿ ನಿಭಾಯಿಸಲು ಇಚ್ಛಾಶಕ್ತಿ ತುಂಬಾನೇ ಅಗತ್ಯ.

 

೫. ಬಾಂಧವ್ಯ ಬೆಳೆಯಲು ಸಮಯ ಬೇಕಾಗುತ್ತದೆ

ನಾವು ಬಾಂಧವ್ಯ ಎಂದು ಹೇಳಿದಾಗ, ಅದು ಎಲ್ಲಾ ಬಾಂಧವ್ಯಗಳ ಬಗ್ಗೆ ಹೇಳುತ್ತಿರುವುದು. ಅದು ನಿಮ್ಮ ಮಗುವಿನೊಂದಿಗಿನ ಬಾಂಧವ್ಯ ಆಗಿರಬಹುದು ಅಥವಾ ನಿಮ್ಮ ಕುಟುಂಬದಲ್ಲಿನ ಬಾಂಧವ್ಯ ಆಗಿರಬಹುದು ಅಥವಾ ನಿಮ್ಮ ಪತಿಯೊಂದಿಗಿನ ಮಾಸಿದ ಸಂಬಂಧವನ್ನ ಮತ್ತೆ ಚಿಗುರಿಸುವುದು ಆಗಿರಬಹುದು. ಸ್ವಲ್ಪ ತಾಳ್ಮೆ ಇಂದ ಇದ್ದರೆ,ಎಲ್ಲವೂ ಸರಿ ಹೋಗುತ್ತದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon